ಪೆರ್ಮುದೆ ಇಗರ್ಜಿಯಲ್ಲಿ ತೆನೆ ಹಬ್ಬ ಆಚರಣೆ

ಪೆರ್ಮುದೆ: ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಕರಾವಳಿ ಕೊಂಕಣಿ ಕಥೋಲಿಕ ಕ್ರೈಸ್ತರ ತೆನೆ ಹಬ್ಬ ನಿನ್ನೆ ಜರಗಿತು. ಧರ್ಮಗುರು ಫಾ| ಹೆರಾಲ್ಡ್ ಡಿಸೋಜ ತೆನಗಳ ಆಶೀರ್ವಚನ ನಡೆಸಿದರು. ಸಹಾಯಕ ಧರ್ಮಗುರು ಫಾ| ಕ್ಲೋಡ್ ಕೋರ್ಡ ಉಪಸ್ಥಿತರಿದ್ದರು. ದಿವ್ಯಬಲಿಪೂಜೆ ಜರಗಿತು. ಕಥೋಲಿಕ ಯುವ ಸಂಚಲನ ಪೆರ್ಮುದೆ ಘಟಕ ಆಯೋಜಿಸಿದ ಕ್ರಿಯೇಟಿವ್ ಕ್ಯಾನ್ ವಾಸ್ ಕಾರ್ಯ ಕ್ರಮದಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಧರ್ಮಗುರು ಬಹುಮಾನ ವಿತರಿಸಿದರು. ಇದರ ಪೂರ್ವಭಾವಿಯಾಗಿ ೯ ದಿನಗಳ ಕಾಲ ಮೇರಿ ಮಾತೆಯ ನೊವೆನಾ, ಕನ್ಯಾ ಮರಿಯಮ್ಮಳಿಗೆ ಪುಷ್ಪಾರ್ಚನೆ ಜರಗಿತು.

Leave a Reply

Your email address will not be published. Required fields are marked *

You cannot copy content of this page