ಪೆರ್ಲದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನಾಚರಣೆ
ಪೆರ್ಲ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾಸಂಘ ಪೆರ್ಲ ಘಟಕ ವತಿಯಿಂದ ಪೆರ್ಲ ವ್ಯಾಪಾರಿ ಭವನದಲ್ಲಿ ಗುರುಗಳ ೧೭೦ನೇ ಜಯಂತಿ ಕಾರ್ಯಕ್ರಮ ನಡೆಸಲಾ ಯಿತು. ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಮೊಕ್ತೇಸರ ಎಂ.ಕೆ. ಕುಕ್ಕಾಜೆ ಮಾತನಾಡಿದರು. ಅಧ್ಯಕ್ಷ ಬಿ.ಪಿ. ಶೇಣಿ ಅಧ್ಯಕ್ಷತೆ ವಹಿಸಿದರು. ನಿವೃತ್ತ ಪ್ರಾಂಶುಪಾಲ ಡಿ. ಸುನಿತ್ ಕುಮಾರ್, ಎಣ್ಮಕಜೆ ಪಂ. ಸದಸ್ಯ ನರಸಿಂಹ ಪೂಜಾರಿ, ಬಿಲ್ಲವ ಸೇವಾ ಸಂಘ ಮಹಿಳಾ ಘಟಕ ಅಧ್ಯಕ್ಷೆ ರುಕ್ಮಿಣಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯೆ ಪೊನ್ನಪ್ಪೆ ಖಂಡಿಗೆ, ಯಶಸ್ವಿ ಮಹಿಳಾ ಉದ್ಯಮಿ ಯಶೋಧ ಕಾನರನ್ನು ಸನ್ಮಾನಿಸಲಾಯಿತು. ಅಮಿತ ಕಾಟುಕುಕ್ಕೆ, ಚಿತ್ರಾ ಖಂಡಿಗೆ ಸನ್ಮಾನ ಪತ್ರ ವಾಚಿಸಿದರು. ಎಸ್ಎಸ್ಎಲ್ಸಿ, ಪ್ಲಸ್ಟು ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡೆ ಸಹಿತ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ನಡೆಯಿತು.ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಿತಿ ಸದಸ್ಯರಿಂದ ಭಜನೆ ಜರಗಿತು. ಪ್ರತೀಕ್ಷಾ ಬಜಕೂಡ್ಲು ಪ್ರಾರ್ಥನೆ ಹಾಡಿದರು. ಕೋಶಾಧಿಕಾರಿ ಪದ್ಮನಾಭ ಸುವರ್ಣ ಸ್ವಾಗತಿಸಿ, ನಾರಾಯಣ ಪೂಜಾರಿ ಮಾಸ್ತರ್ ನಿರೂಪಿಸಿದರು. ಕಾರ್ಯದರ್ಶಿ ಅಖಿಲೇಶ್ ಕಾನ ವಂದಿಸಿದರು