ಪೆರ್ಲದಲ್ಲಿ ಸಂಭ್ರಮದಿಂದ ಜರಗಿದ ಮರಾಟಿ ದಿನಾಚರಣೆ
ಪೆರ್ಲ: ಕೇರಳ ಮರಾಟಿ ದಿನಾಚರಣೆ 2024, ಪೆರ್ಲ ಮರಾಟಿ ಬೋರ್ಡಿಂಗ್ ಹಾಲ್ನಲ್ಲಿ ನಡೆಯಿತು. ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ, ಮರಾಟಿ ಚಾರಿಟೇಬಲ್ ಟ್ರಸ್ಟ್ ಪೆರ್ಲ ಮತ್ತು ಮರಾಟಿ ಮಹಿಳಾ ವೇದಿಕೆ ಪೆರ್ಲ ಇದರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.
ಮರಾಟಿ ಸಂರಕ್ಷಣಾ ಸಮಿತಿ ಸ್ಥಾಪಕ ಕಾರ್ಯದರ್ಶಿ ಹಾಗೂ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ನ ಮೆನೇಜಿಂಗ್ ಟ್ರಸ್ಟಿಯೂ ಆಗಿರುವ ಡಾ. ಬಿ. ನಾರಾಯಣ ನಾಯ್ಕ್ ಧ್ವಜಾರೋಹಣ ಗೈದು ಮರಾಟಿ ದಿನಾಚರಣೆಗೆ ಚಾಲನೆ ನೀಡಿದರು. ಮರು ಮೀಸಲಾತಿಗಾಗಿ ೨೦೦೧ರಿಂದ ನಡೆದ ಹೋರಾಟದ ಸಂಕ್ಷಿಪ್ತ ವಿವರಣೆಯನ್ನೂ ನೀಡಿದರು. ಮಾತ್ರವಲ್ಲ ಸಮಾಜದ ಅಭಿವೃದ್ಧಿ ಪ್ರತಿಯೊಬ್ಬರೂ ಶ್ರಮಿಸ ಬೇಕೆಂದು ಅವರು ಕರೆ ನೀಡಿದರು. ಮೀಸಲಾತಿ ಹೋರಾಟ ದಲ್ಲಿ ಸಕ್ರಿಯ ಅಧ್ಯಕ್ಷ ಬಾಲಕೃಷ್ಣ ಮಾಸ್ತರ್ ಕಯ್ಯಾರ್, ಡಾ. ಬಿ.ಜಿ. ನಾಯ್ಕ್ರ ಪಾತ್ರವನ್ನು ಇದೇ ಸಂದರ್ಭದಲ್ಲಿ ನೆನಪಿಸಲಾ ಯಿತು. ಡಾ. ಬಿ.ಜಿ. ನಾಯ್ಕ್ ಅಧ್ಯಕ್ಷತೆ ವಹಿಸಿದರು. ಡಾ. ಶಿವ ನಾಯ್ಕ, ಸಿ.ಎಚ್ ಗೋವಿಂದ ನಾಯ್ಕ್, ಮಹಿಳಾ ವೇದಿಕೆ ಅಧ್ಯಕ್ಷೆ ವಾರಿಜ, ಶಶಿಕಲ ಪೂರ್ಣಿಮಾ ಪುರಂದರ, ಪುರಂದರ ಮಾಸ್ತರ್ ಪೆರ್ಲ, ಕೃಷ್ಣ ನಾಯ್ಕ್ ಕೂಡ್ಲು, ಶೀನ ನಾಯ್ಕ್, ಐತ್ತಪ್ಪ ನಾಯ್ಕ, ಬಾಲಕೃಷ್ಣ ನಾಯ್ಕ್, ನಲ್ಕ, ಭವಾನಿ ಏಳ್ಕಾನ, ನಾರಾಯಣ ನಾಯ್ಕ್, ಕಯ್ಯಾರ್ ಮೊದಲಾ ದವರು ಭಾಗ ವಹಿಸಿದರು. ಮರಾಟಿ ಸಮಾಜದ ಏಳಿಗೆಗಾಗಿ ನಡೆಸಿದ ಹೋರಾಟವನ್ನು ಗುರುತಿಸಿ ಡಾ. ಬಿ.ಜಿ. ನಾಯ್ಕ್ರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ, ಹಣ್ಣು ಹಂಪಲು ನೀಡಿ ಸನ್ಮಾನಿಸಲಾಯಿತು.