ಪೆರ್ಲದಿಂದ ಯುವತಿ ನಾಪತ್ತೆ: ಜ್ಯುವೆಲ್ಲರಿಯಲ್ಲಿಚಿನ್ನಾಭರಣ ಮಾರಾಟಗೈದಿರುವುದಾಗಿ ಮಾಹಿತಿ
ಬದಿಯಡ್ಕ: ನಿನ್ನೆ ಬೆಳಿಗ್ಗೆ ಮನೆಯಿಂದ ಹೊರಗೆ ತೆರಳಿದ ಯುವತಿ ಬಳಿಕ ನಾಪತ್ತೆಯಾಗಿರು ವುದಾಗಿ ದೂರಲಾಗಿದೆ. ಪೆರ್ಲ ನಲ್ಕ ದ ಜಗದೀಶ್ ಎಂಬವರ ಪತ್ನಿ ಹೇಮ ಲತ (40) ನಾಪತ್ತೆಯಾಗಿದ್ದಾರೆ. ಇದರಂತೆ ಪತಿ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮಧ್ಯಾಹ್ನ ವೇಳೆ ಪತಿಗೆ ಫೋನ್ ಕರೆ ಮಾಡಿದ ಹೇಮಲತ ತಾನು ಜ್ಯುವೆಲ್ಲರಿಯೊಂದರಲ್ಲಿರುವುದಾಗಿ ತಿಳಿಸಿದ್ದರೆನ್ನಲಾಗಿದೆ. ಅನಂತರ ಆಕೆಯ ಕುರಿತು ಯಾವುದೇ ಮಾಹಿತಿಯಿಲ್ಲ ದುದರಿಂದ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ ನಾಪತ್ತೆ ಯಾಗುವ ಮೊದಲು ಹೇಮಲತ ಜ್ಯುವೆಲ್ಲರಿಯೊಂದರಲ್ಲಿ 40 ಸಾವಿರ ರೂಪಾಯಿಗಳ ಚಿನ್ನಾಭರಣ ಮಾರಾ ಟಗೈದಿರುವುದು ತಿಳಿದುಬಂದಿದೆ. ಸಂಜೆ ೪ ಗಂಟೆ ವೇಳ ಹೇಮಲತರನ್ನು ಪೆರ್ಲ ಪೇಟೆಯಲ್ಲಿ ಕೆಲವರು ಕಂಡಿರುವುದಾಗಿ ಮಾಹಿತಿ ಲಭಿಸಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.