ಪೇರಾಲ್ ಶಾಲೆಯಲ್ಲಿ ಕಲೋತ್ಸವ ಕುಂಬಳೆಯಲ್ಲಿ ಡಂಗುರ ಜಾಥಾ

ಕುಂಬಳೆ: ನವೆಂಬರ್ ೧೪ರಿಂದ ೧೮ರ ವರೆಗೆ ಪೇರಾಲ್ ಜಿಜೆಬಿಎಸ್ ಶಾಲೆಯಲ್ಲಿ ನಡೆಯುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸಿದ್ಧತೆಗಳು ಪೂರ್ತಿಗೊಳ್ಳುತ್ತಿದೆ. ಪೇರಾಲ್ ಗ್ರಾಮ ಈಗಾಗಲೇ ಉತ್ಸವಛಾಯೆಯಲ್ಲಿದೆ. ಸಂಘ ಸಂಸ್ಥೆಗಳು, ಸ್ಥಳೀಯರು ಕಲೋತ್ಸವ ಸಮಿತಿಯೊಂ ದಿಗೆ ಸಹಕರಿಸಿ ಕಾರ್ಯಾಚರಿಸುತ್ತಿದ್ದಾರೆ.

ಕಲೋತ್ಸವದ ಪೂರ್ವಭಾವಿಯಾಗಿ ಕುಂಬಳೆ ಪೇಟೆಯಲ್ಲಿ ಸ್ವಾಗತ ಸಮಿತಿ ಹಾಗೂ ಸ್ಥಳೀಯರ, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಡಂಗುರ ಜಾಥಾ ನಡೆಸಲಾಯಿತು. ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪ್ಯನ್, ದ್ಯಾನ್‌ಚಂದ್ ಪ್ರಶಸ್ತಿ ವಿಜೇತ ಕೆ.ಸಿ. ಲೇಖ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.  ಡಂಗುರ ಜಾಥಾದಲ್ಲಿ ಯಕ್ಷಗಾನ, ಒಪ್ಪನ, ಮೋಹಿನಿಯಾಟ್ಟಂ, ಭರತನಾಟ್ಯ, ದಫ್‌ಮುಟ್ಟ್, ಬ್ಯಾಂಡ್ ಮೇಳ ಎಂಬಿವು ಪ್ರದರ್ಶನಗೊಂಡಿತು. ಜನಪ್ರತಿನಿಧಿಗಳು ಸಹಿತ ವಿವಿಧ ಸಮಿತಿ ಸದಸ್ಯರು, ಪಿಟಿಎ, ಎಂಎಸ್‌ಸಿ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದರು.

RELATED NEWS

You cannot copy contents of this page