ಪೈವಳಿಕೆಯಲ್ಲಿ ಸಿಪಿಎಂ ವತಿಯಿಂದ ವಿಚಾರ ಸಂಕಿರಣ

ಪೈವಳಿಕೆ: ಸಿಪಿಎಂ ಕಾಸರಗೋಡು ಜಿಲ್ಲಾ ಸಮ್ಮೇಳನ ಫೆಬ್ರವರಿ 5, 6, 7ರಂದು ಕಾಞಂಗಾ ಡ್‌ನಲ್ಲಿ ನಡೆಯಲಿದೆ. ಸಮ್ಮೇಳನದ ಅಂಗವಾಗಿ ಸಿಪಿಎಂ ವತಿಯಿಂದ ಸಾಹಿತಿ ನಿರಂಜನರ ಜನ್ಮ ಶತಾಬ್ದಿ ಸಂಭ್ರಮದಂಗವಾಗಿ ತುಳುನಾಡಿನ ರೈತ ಹೋರಾಟ ಹಾಗೂ ಕಯ್ಯೂರು ಚಿರಸ್ಮರಣೆಯ ನೆನಪುಗಳ ಕುರಿತಿರುವ ವಿಚಾರಗೋಷ್ಠಿ ಪೈವಳಿಕೆ ನಗರದಲ್ಲಿ ನಡೆಯಿತು.  ಹಂಪಿ ವಿಶ್ವವಿದ್ಯಾಲ ಯದ ಮಾಜಿ ಉಪಕುಲಪತಿ  ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ಸಿಪಿಎಂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ಯಮುನಾ ಗಾಂವ್ಕರ್, ಮಂಜೇಶ್ವರ ಏರಿಯಾ ಕಾರ್ಯದರ್ಶಿ ವಿ.ವಿ. ರಮೇಶನ್ ಮಾತನಾಡಿದರು. ಅಬ್ದುಲ್ ರಜಾಕ್ ಚಿಪ್ಪಾರು ಸ್ವಾಗತಿಸಿದರು.

You cannot copy contents of this page