ಪೈವಳಿಕೆ: ತೆಂಕ ಮಾನಿಪ್ಪಾಡಿ ಸೇತುವೆ ಶಿಥಿಲಾವಸ್ಥೆಯಲ್ಲಿ ಹೊಸ ಸೇತುವೆ ನಿರ್ಮಿಸದಿದ್ದಲ್ಲಿ ಹೋರಾಟ-ಮುಸ್ಲಿಂಲೀಗ್

ಪೈವಳಿಕೆ: ಹಲವು ವರ್ಷಗಳ ಹಿಂದೆ ನಿರ್ಮಿಸಿದ ಕಿರು ಸೇತುವೆ ಯೊಂದು ಶಿಥಿಲಾವಸ್ಥೆಯಲ್ಲಿದ್ದು, ಜನರ ಸಂಚಾರಕ್ಕೆ ಭೀತಿ ಹುಟ್ಟಿಸುತ್ತಿದೆ. ಪೈವಳಿಕೆ ಪಂಚಾಯತ್‌ನ ನಾಲ್ಕು ಹಾಗೂ ಹನ್ನೊಂದನೇ ವಾರ್ಡ್‌ಗಳಾದ ಮಾನಿಪ್ಪಾಡಿ-ತೆಂಕಮಾನಿಪ್ಪಾಡಿ, ಆವಳ ಪ್ರದೇಶಗಳನ್ನು ಸಂಪರ್ಕಿಸುವ ಸೇತುವೆ ಇದಾಗಿದೆ. ಇದು ಅಗಲ ಕಿರದಾಗಿದೆ. ಅಲ್ಲದೆ ಹಲವು  ವರ್ಷಗಳ ಹಳಮೆ ಇರುವುದರಿಂದ ಇದೀಗ ಶಿಥಿಲಾವಸ್ಥೆಯಲ್ಲಿದೆ. ನೂರಾರು ಕುಟುಂಬಗಳು  ತಮ್ಮ  ಮನೆಗಳಿಗೆ ಈ ಸೇತುವೆ ಮೂಲಕ ನಡೆದು ಹೋಗಬೇಕಾಗಿದೆ. ಅಲ್ಲದೆ ಈ ಸೇತುವೆಯನ್ನು ದಾಟಿ ಮಕ್ಕಳು ಶಾಲೆಗೆ ತೆರಳಬೇಕು. ಆದರೆ ಅಗಲಕಿರಿದಾಗಿರುವ ಹಾಗೂ ಶೋಚನೀಯ ಸ್ಥಿತಿಯಲ್ಲಿರುವ ಸೇತುವೆ ಮೂಲಕ ನಡೆದಾಡುವುದು ಭಯ ಹುಟ್ಟಿಸುತ್ತಿರುವುದಾಗಿ ದೂರಲಾಗಿದೆ.

ಪೈವಳಿಕೆಯಲ್ಲಿ  ನಡೆದ ಮುಖ್ಯಮಂತ್ರಿಯ ಜನಸಂಪರ್ಕ ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ಸೇತುವೆಯ ದುರವಸ್ಥೆಯನ್ನು ವಿವರಿಸಿ ಮನವಿ ಸಲ್ಲಿಸಲಾಗಿದೆ. ಆದರೂ ಸೇತುವೆ ನಿರ್ಮಾಣಕ್ಕೆ ಕ್ರಮ ಉಂಟಾಗಿಲ್ಲವೆಂ ದು ಮುಸ್ಲಿಂ ಲೀಗ್ ಪೈವಳಿಕೆ ಪಂಚಾ ಯತ್ ಪ್ರಧಾನ ಕಾರ್ಯದರ್ಶಿ ಅಸೀಸ್ ಕಳಾಯಿ ಆರೋಪಿಸಿದ್ದಾರೆ. ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಚಳವಳಿಗೆ  ನೇತೃತ್ವ ನೀಡಬೇಕಾಗಿ ಬರಲಿದೆಯೆಂ ದೂ ಅಸೀಸ್ ಕಳಾಯಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page