ಪೈವಳಿಕೆ ನಿವಾಸಿಗಳು ಸಂಚರಿಸಿದ ಕಾರು ಪುತ್ತೂರಿನಲ್ಲಿ ಅಪಘಾತ: ನಾಲ್ವರಿಗೆ ಗಾಯ

ಪೈವಳಿಕೆ: ಪೈವಳಿಕೆ ಪಂ. ವ್ಯಾಪ್ತಿಯ ಕುಟುಂಬವೊಂದು ಸಂಚರಿಸುತ್ತಿದ್ದ ಕಾರು ಪುತ್ತೂರು ಬಳಿ ನಿಲ್ಲಿಸಿದ್ದ ಗೂಡ್ಸ್ ಲಾರಿಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತ ದಲ್ಲಿ ೪ ಮಂದಿ ಗಾಯಗೊಂಡಿದ್ದಾರೆ.

ಪೈವಳಿಕೆ ಸುರುಳಿಮೂಲೆ ನಿವಾಸಿಗಳಾದ ಕೃಷ್ಣಪ್ಪ ನಾಯ್ಕ (೬೦), ಪತ್ನಿ ಗುಲಾಬಿ (೫೫), ರೋಹಿಣಿ (೩೨), ಗನ್ಯ(೨) ಗಾಯಗೊಂಡವರು. ಕಾರಿನಲ್ಲ್ಲಿ ಸಂಚರಿಸುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್‌ಗೆ ಸೈಡ್ ನೀಡುವಾಗ ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್ ಲಾರಿಗೆ  ಕಾರು ಢಿಕ್ಕಿ ಹೊಡೆದಿದೆ. ಪುತ್ತೂರು ಮರೀಲ್‌ನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಳಿ ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

You cannot copy contents of this page