ಪೈವಳಿಕೆ ಪಂಚಾಯತ್ ಎರಡನೇ ವಾರ್ಡ್ ಸದಸ್ಯೆ ರಾಜೀನಾಮೆ
ಕುಂಬಳೆ: ಸಿಪಿಎಂ ನೇತೃತ್ವವನ್ನು ಬೆಚ್ಚಿ ಬೀಳಿಸಿ ಸಿಪಿಎಂನ ಶಕ್ತಿ ಕೇಂದ್ರ ವಾದ ಪೈವಳಿಕೆ ಪಂಚಾಯತ್‌ನ ಸಿರಂ ತಡ್ಕ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ ಮುಸ್ಲಿಂ ಲೀಗ್‌ನ ಪಂಚಾಯತ್ ಸದಸ್ಯೆ ರಾಜೀನಾಮೆ ನೀಡಿದ್ದಾರೆ.
ಎರಡನೇ ವಾರ್ಡ್ ಸದಸ್ಯೆಯಾದ ಸಿಯಾಸುನ್ನಿಸ ಎಂಬವರು ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ಪತ್ರವನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಪಂಚಾಯತ್ ಸೆಕ್ರೆಟರಿಗೆ ಕಳುಹಿ ಸಿಕೊಟ್ಟಿದ್ದಾರೆ.
ಹಲವು ಕಾಲದಿಂದ ಪೈವಳಿಕೆ ಪಂಚಾಯತ್‌ನ ಸಿರಂತಡ್ಕ ವಾರ್ಡ್‌ನಲ್ಲಿ ಸಿಪಿಎಂ ಅಭ್ಯರ್ಥಿ ಗೆಲುವು ಸಾಧಿಸಿ ಪಂಚಾಯತ್ ಆಡಳಿತಸಮಿತಿಗೆ ತಲುಪುತ್ತಿದ್ದರು. ಕಳೆದ ಚುನಾವಣೆಯಲ್ಲಿ ಎಡರಂಗದಲ್ಲಿ ನಡೆದ ಒಪ್ಪಂದ ಪ್ರಕಾರ ಈ ವಾರ್ಡ್‌ನ್ನು ಸಿಪಿಐಗೆ ನೀಡಲಾಗಿತ್ತು. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ೩೫ ಮತಗಳ ಅಂತರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಿಯಾಸುನ್ನಿಸ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟ ಬಹುಮತ ಲಭಿಸದ ಸಿಪಿಎಂ ಚೀಟಿ ಎತ್ತುವ ಮೂಲಕ ಲಭಿಸಿದ ಅದೃಷ್ಟದಲ್ಲಿ ಆಡಳಿತ ಸಮಿತಿಗೆ ತಲುಪಿತ್ತು. ಒಟ್ಟು ೧೯ ವಾರ್ಡ್‌ಗಳ ಪೈಕಿ ಸಿಪಿಎಂ ಹಾಗೂ ಬಿಜೆಪಿಗೆ ತಲಾ ಎಂಟು ಸೀಟುಗಳು ಲಭಿಸಿವೆ. ಮುಸ್ಲಿಂ ಲೀಗ್‌ಗೆ ಎರಡು, ಕಾಂಗ್ರೆಸ್‌ಗೆ ಒಂದು ಸೀಟುಗಳಿವೆ. ಸಿಯಾಸುನ್ನಿಸರ ರಾಜೀನಾಮೆ ಪತ್ರವನ್ನು ಪಂಚಾಯತ್ ಕಾರ್ಯದರ್ಶಿ ಸ್ವೀಕರಿಸಿದರೆ ಸಿರಂತಡ್ಕ ವಾರ್ಡ್‌ನಲ್ಲಿ ಉಪ ಚುನಾವಣೆಗೆ ಕಣ ಸಿದ್ಧವಾಗಲಿದೆ. ಇದು ಲೀಗ್ ನೇತೃತ್ವಕ್ಕೆ ಭಾರೀ ಸವಾಲಾಗಿ ಪರಿಣಮಿಸಲಿದೆಯೆಂದು ನಾಡಿನಲ್ಲಿ ಚರ್ಚೆಯಾಗುತ್ತಿದೆ. ಇದೇ ವೇಳೆ ಸಿಯಾಸುನ್ನಿಸ ಪಕ್ಷಕ್ಕೆ ತಿಳಿಸದೆ ಪಂಚಾಯತ್ ಸದಸ್ಯಕ್ಕೆ ಯಾಕಾಗಿ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿಲ್ಲ.