ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ಗುಡ್ಡೆ ಜರಿದು ಎರಡು ಮನೆಗಳಿಗೆ ಹಾನಿ

ಉಪ್ಪಳ: ಗಾಳಿ, ಮಳೆ ವ್ಯಾಪಕಗೊಂಡಿರುವಂತೆ ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ಗುಡ್ಡೆ ಜರಿದು ಎರಡು ಮನೆಗಳಿಗೆ ಹಾನಿ ಉಂಟಾಗಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮೊನ್ನೆ ರಾತ್ರಿ ಘಟನೆ ನಡೆದಿದೆ. ಕುದ್ರೆಕೂಡ್ಲು ನಿವಾಸಿ ಮಾಲತಿ ಶಂಕರನಾ ರಾಯಣ ಭಟ್ ಎಂಬವರ ಹೆಂಚು ಹಾಸಿದ ಮನೆಯ ಹಿಂಭಾಗದಲ್ಲಿರುವ ಗುಡ್ಡೆ ಜರಿದು ಮನೆ ಹಾನಿಗೀಡಾಗಿದೆ. ಅಲ್ಲದೆ ಸೌದಿಮೂಲೆ ನಿವಾಸಿ ಕುಟ್ಯಾಮಿ ಮೊಹಮ್ಮದ್ ಎಂಬವರ ಹೆಂಚು ಹಾಸಿದ ಮನೆಗೂ ಪರರಿಸರದ ಗಡ್ಡೆ ಜರಿದು ಬಿದ್ದು ಹಾನಿ ಉಂಟಾಗಿದೆ. ಸ್ಥಳಕ್ಕೆ ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಸದಸ್ಯ ಅಬ್ದುಲ್ಲ, ವಿಲ್ಲೇಜ್ ಆಫೀಸರ್ ಮೊಯ್ದೀನ್ ಕುಂಞಿ, ಸಿಬ್ಬಂದಿ ಬೈಜು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

RELATED NEWS

You cannot copy contents of this page