ಪೈವಳಿಕೆ: ರಾಜೀವ್ ಗಾಂಧಿ ಪುಣ್ಯಸ್ಮರಣೆ

ಪೈವಳಿಕೆ: ಪೈವಳಿಕೆ ಮಂಡಲ ಕಾಂಗ್ರೆಸ್(ಐ) ಸಮಿತಿಯ ಆಶ್ರಯದಲ್ಲಿ ರಾಜೀವ ಗಾಂಧಿಯವರ 33ನೇ ಸಂಸ್ಮರಣೆ ಪೈವಳಿಕೆ ಪಕ್ಷದ ಕಚೇರಿಯಲ್ಲಿ ನಿನ್ನೆ ಆಚರಿಸಲಾಯಿತು. ಮಂಡಲ ಅಧ್ಯಕ್ಷ ಸಿ.ಕೆ. ವಸಂತಕುಮಾರ್ ಪುಷ್ಪಾರ್ಚನೆ ನಡೆಸಿದರು. ಬ್ಲಾಕ್ ಪದಾಧಿಕಾರಿಗಳಾದ ಶಬೀರ್ ಎ.ಕೆ., ರಾಘವೇಂದ್ರ ಭಟ್, ನಾರಾಯಣ ಏದಾರ್, ಮಂಡಲ ಕಮಿಟಿ ಪದಾಧಿಕಾರಿಗಳಾದ ಅಬ್ದುಲ್ಲ ಹಾಜಿ, ಎಡ್ವರ್ಡ್ ಡಿ ಸೋಜ, ಅಸೀಸ್ ಕಟ್ಟೆ, ಮೊಹಮ್ಮದ್ ಕಯ್ಯಾರು, ಜೋಯ್ವಿನ್ ಜೋಯಿವಿನ್ ಡಿ.ಸೋಜ ಭಾಗವಹಿಸಿದರು. ಐ.ಎನ್.ಟಿ.ಯು.ಸಿ ಮುಖಂಡ ಶಾಜಿ ಸ್ವಾಗತಿಸಿದರು. ನೌಶಾದ್ ಕಯ್ಯಾರು ವಂದಿಸಿದರು.

RELATED NEWS

You cannot copy contents of this page