ಪೈವಳಿಕೆ: ಶೆಟ್ಟಿ ಸಹೋದರರ ಹುತಾತ್ಮ ದಿನಾಚರಣೆ, ಸಾರ್ವಜನಿಕ ಸಭೆ
ಪೈವಳಿಕೆ : ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಭೂ ಮಾಲೀಕರ ಗುಂಡು ತಗಲಿ ಹುತಾತ್ಮರಾದ ಪೈವಳಿಕೆ ಕಮ್ಯುನಿಸ್ಟ್ – ರೈತ ಸಂಘಟನೆಯ ಮುಖಂಡರಾದ ಸುಂದರ ಶೆಟ್ಟಿ, ಮಹಾಬಲ ಶೆಟ್ಟಿ, ಚೆನ್ನಪ್ಪ ಶೆಟ್ಟಿ ಅವರ 66 ನೇ ಹುತಾತ್ಮ ದಿನಾಚರಣೆ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಪೈವಳಿಕೆಯಲ್ಲಿ ನಡೆಯಿತು. ಸಿಪಿಎಂ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪಿ.ಕೆ ಬಿಜು ಉದ್ಘಾಟಿಸಿದರು. ಚಂದ್ರ ನಾಯ್ಕ ಮಾನಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್ ಜಯಾನಂದ, ಅಬ್ದುಲ್ ರಝಾಕ್ ಚಿಪ್ಪಾರು, ಚಂದ್ರಹಾಸ ಶೆಟ್ಟಿ ಮಾಸ್ಟರ್, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ, ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಸುಳ್ಯಮೆ, ಬೇಬಿ ಶೆಟ್ಟಿ, ಅಬ್ದುಲ್ಲಾ.ಕೆ, ಪುರುಷೋತ್ತಮ ಬಳ್ಳೂರು, ವಿನಯ್ ಕುಮಾರ್, ಅಶೋಕ್ ಭಂಡಾರಿ ಪಾಲ್ಗೊಂಡಿದ್ದರು. ಅಬ್ದುಲ್ ಹಾರಿಸ್ ಸ್ವಾಗತಿಸಿದರು. ಬೋಳಂಗಲ ಹುತಾತ್ಮ ಸ್ಮೃತಿ ಮಂಟಪದಲ್ಲಿ ನಡೆದ ಪುಷ್ಪಾರ್ಚನೆ ಹಾಗೂ ಸಂಸ್ಮರಣಾ ಸಭೆಯನ್ನು ಸಿಪಿಎಂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್ ಜಯಾನಂದ ಉದ್ಘಾಟಿಸಿದರು. ಸಂಜೀವ ಶೆಟ್ಟಿ ಕಳಾಯಿ ಧ್ವಜಾರೋಹಣ ನೆರವೇರಿಸಿದರು. ಅಬ್ದುಲ್ಲಾ ಕೆ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಶೆಟ್ಟಿ, ಶ್ರೀನಿವಾಸ ಭಂಡಾರಿ, ಪಿ.ಕೆ ಹುಸೈನ್ ಮಾಸ್ಟರ್, ಡಿ ಕಮಲಾಕ್ಷ ಮಾತನಾಡಿದರು