ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಧ್ವಜಸ್ತಂಭ ಮೆರವಣಿಗೆ: ವಿವಿಧೆಡೆ ಸ್ವಾಗತ
ಕುಂಬ್ಡಾಜೆ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ನವೀಕರಣೆಯಂಗವಾಗಿ ನಿನ್ನೆ ಧ್ವಜಸ್ತಂಭ ಮೆರವಣಿಗೆ ಜರಗಿತು. ಕುತ್ತಿಕ್ಕೋಲ್ ಬಳಿಯ ಚುಳ್ಳಿಕ್ಕೆರೆಯಿಂದ ಧ್ವಜಸ್ತಂಭವನ್ನು ಮೆರವಣಿಗೆ ಮೂಲಕ ಮುಳ್ಳೇರಿಯ ನಾರಂಪಾಡಿ, ಮಾರ್ಪನಡ್ಕ ಮೂಲಕ ಕ್ಷೇತ್ರಕ್ಕೆ ತಲುಪಿಸಲಾಗಿದೆ. ಈ ವೇಳೆ ಅಲ್ಲಲ್ಲಿ ಸ್ವಾಗತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕರುವಲ್ತಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ಧ್ವಜಸ್ತಂಭ ವರವಣಿಗೆಗೆ ಸ್ವಾಗತ ನೀಡಿ ಕೋಮು ಸೌಹಾರ್ದ ಮೆರೆದರು. ಉಮ್ಮರ್ ಅಸ್‌ಹನಿ ಖತೀಬ್, ಹುಸೈನ್ ಹಿಮ್ಮಿ ಮುಹದ್ದಿನ್, ಸುಬೈರ್ ಕರ್ವಾಚ್ಚಾಲ್, ಮುಹಮ್ಮದ್, ಅಬ್ದುಲ್ ಖಾದರ್, ಕೆ. ಫರೂಕ್ ನೇತೃತ್ವ ನೀಡಿದರು. ಕ್ಷೇತ್ರದ ಆಡಳಿತ ಸಮಿತಿ, ನವೀಕರಣ ಸಮಿತಿ, ಸ್ಥಾನಿಕರು, ವಿವಿಧ ಸಮಿತಿ ಪದಾಧಿಕಾರಿಗಳು, ಸಾಮಾಜಿಕ, ಧಾರ್ಮಿಕ ಮುಂದಾಳುಗಳು ಭಾಗವಹಿಸಿದರು.