ಕಾಸರಗೋಡು: ತೆರೆದ ಸ್ಥಳದಲ್ಲಿ ಧೂಮಪಾನ ಗೈಯ್ಯುತ್ತಿದ್ದುದನ್ನು ಪ್ರಶ್ನಿಸಿದ ಯುವಕನಿಗೆ ಹಲ್ಲೆನಡೆಸಿದ ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ಪೊಲೀಸರ ಮೇಲೂ ಹಲ್ಲೆ ನಡೆಸಿ ಅವರ ಮೊಬೈಲ್ ಫೋನ್ ಹಿಡಿದೆಳೆದ ಪ್ರಕರಣದ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ.
ಪಡನ್ನಕ್ಕಾಡ್ ಟಿ.ಎಂ. ಕ್ವಾರ್ಟರ್ಸ್‌ನ ಕೆ.ಪಿ. ಶಹಾದ್ (23) ಬಂಧಿತ ಆರೋಪಿ, ಪಡನ್ನಕ್ಕಾಡ್‌ನ ಸಂಸ್ಥೆಯೊಂದರ ಮುಂದೆ ಪರಪ್ಪಚಾಲು ಆರ್. ಷಣ್ಮುಖ ಕುಮಾರ್‌ನ ಮೇಲೆ ಆರೋಪಿ ಶಾಹೀದಾ ಮತ್ತು ಆತನ ಸ್ನೇಹಿತ ಸೇರಿ ಹಲ್ಲೆ ನಡೆಸಿದ್ದರು. ವಿಷಯ ತಿಳಿದು ಅಲ್ಲಿಗೆ ಆಗಮಿಸಿ ಪೊಲೀಸರ ಮೇಲೆ ಶಾಹಿದ್ ಹಲ್ಲೆ ನಡೆಸಿ ಅವರ ಮೊಬೈಲ್ ಫೋನ್‌ನ್ನು ಕಸಿದೆಳೆದು ಅಲ್ಲಿಂದ ಪರಾರಿಯಾಗಿದ್ದನು. ಅದಕ್ಕೆ ಸಂಬಂಧಿಸಿ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಕೊನೆಗೂ ಬಂಧಿಸಿದ್ದಾರೆ.