ಪೊಲೀಸರ ಮೇಲೆ ದಾಳಿ ನಡೆಸಿ ಕಳವು ಆರೋಪಿಯನ್ನು ಬಿಡುಗಡೆಗೊಳಿಸಿದ ಇಬ್ಬರ ಸೆರೆ
ಕಾಸರಗೋಡು: ಪೊಲೀಸರ ಮೇಲೆ ದಾಳಿ ನಡೆಸಿ ಕಳವು ಪ್ರಕರಣದ ಆರೋಪಿಯನ್ನು ಬಿಡುಗಡೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಉದುಮ ಕಣಿಯಂ ಪಾಡಿಯ ಮುಹಮ್ಮದ್ ಬಿಲಾಲ್ (22) ಮತ್ತು ಬಾರ ಬಂಗಣತೊಟ್ಟಿಯ ಮುಹಮ್ಮದ್ ಅಮೀನ್ (32) ಬಂಧಿತ ಆರೋಪಿಗಳು. ಇವರನ್ನು ನಂತರ ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಬಂಧಿತರ ಪೈಕಿ ಮುಹಮ್ಮದ್ ಬಿಲಾಲ್‌ನ ತಂದೆ ಕಣಿಯಂಪಾಡಿಯ ಮುಹಮ್ಮದ್ ಸಲೀಂನ ಹೆಸರಲ್ಲಿ ಮುಂಬೈ ಪೈದುನಿ ಪೊಲೀಸ್ ಠಾಣೆಯಲ್ಲಿ ಕೇಸೊಂದು ದಾಖಲುಗೊಂಡಿತ್ತು. ಆ ಬಗ್ಗೆ ತನಿಖೆ ನಡೆಸಲೆಂದು ತಲುಪಿದ ಮುಂಬೈ ಪೊಲೀಸರಿಗೆ ಸಹಾಯ ಮಾಡಲೆಂದು ಅವರ ಜೊತೆ ಹೋದ ಬೇಕಲ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಕೆ.ಟಿ. ಶಾಜನ್‌ರನ್ನು ಒಂದು ತಂಡ ತಡೆದು ನಿಲ್ಲಿಸಿ ಹಲ್ಲೆ ನಡೆಸಿತ್ತೆಂದು ದೂರಲಾಗಿದೆ. ಮಾತ್ರವಲ್ಲ ಆ ವೇಳೆ ಪೊಲೀಸರು ಕಸ್ಟಡಿಯಲ್ಲಿದ್ದ ಮುಹಮ್ಮದ್ ಸಲೀಂ ತಪ್ಪಿಸಿಕೊಂಡಿದ್ದನು. ಅದಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.