ಪೋಕ್ಸೋ ಪ್ರಕರಣ: ವಿಚಾರಣೆ ವೇಳೆ ತಲೆಮರೆಸಿಕೊಂಡಿದ್ದ ಆರೋಪಿ ಪ.ಬಂಗಾಳದಿಂದ ಬಂಧನ

ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದು ವಿಚಾರಣೆ ವೇಳೆ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ಪಶ್ಚಿಮ ಬಂಗಾಳ ದಿಂದ ವಿದ್ಯಾನಗರ ಪೊಲೀಸ್ ಠಾಣೆಯ ಎಸ್.ಐ. ಉಮೇಶನ್‌ರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಪಶ್ಚಿಮ ಬಂಗಾಳ ಪುರ್‌ಬಸ್ತಲಿ ಕೃಷ್ಣ ಪುರಿ ನಿವಾಸಿ ಗೋಲಂ ಮುಹಮ್ಮದ್ ಮುಸ್ತಫಾ ಮಂಡನ್ (25) ಬಂಧಿತ ಆರೋಪಿ. ೨೦೨೨ರಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಪ್ರಸ್ತುತ ಪ್ರಕರಣದ ವಿಚಾರಣೆ ಕಾಸರಗೋಡು ಫಾಸ್ಟ್ ಟ್ರಾಕ್ ನ್ಯಾಯಾಲಯದಲ್ಲಿ ಆರಂಭಿಸಿರುವಂತೆಯೇ, ಆ ವೇಳೆ ಆತ ತಲೆಮರೆಸಿಕೊಂಡಿದ್ದನು. ಅದರಂತೆ ಆತನ ಪತ್ತೆಗಾಗಿ  ನ್ಯಾಯಾಲಯ ವಾರೆಂಟ್ ಜ್ಯಾರಿಗೊಳಿಸಿತ್ತು. ಅದರಂತೆ ಎಸ್‌ಐ ಉಮೇಶನ್‌ರ ನೇತೃತ್ವದ ಪೊಲೀಸರು ಪಶ್ಚಿಮಬಂಗಾಳಕ್ಕೆ ಸಾಗಿ ಆರೋಪಿಯನ್ನು ಅಲ್ಲಿಂದ ಪತ್ತೆಹಚ್ಚಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ನಂತರ ಆತನನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಬಂಧಿತನನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page