ಪೋಪ್ ಫ್ರಾನ್ಸಿಸ್ ನಿಧನ: ಭಾರತದಲ್ಲಿ ಮೂರು ದಿನ ಶೋಕಾಚರಣೆ

ನವದೆಹಲಿ: ನಿಧನರಾದ ಪೋಪ್ ಫ್ರಾನ್ಸಿಸ್‌ರಿಗೆ  ಗೌರವ ಸಲ್ಲಿಸಲು ಭಾರತ, ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ತಮ್ಮ ವಿನಮ್ರ ಶೈಲಿ ಮತ್ತು ಬಡವರ ಬಗ್ಗೆ ಕಾಳಜಿಯಿಂದ ಇಡೀ ಜಗತ್ತನ್ನೇ ಮೋಡಿ ಮಾಡಿದ  ಪೋಪ್ ಧರ್ಮಗುರು ಫ್ರಾನ್ಸಿಸ್ ತಮ್ಮ 88ನೇ ವಯಸ್ಸಿನಲ್ಲಿ    ನಿಧನಹೊಂದಿದರು.  ಅವರ ನಿಧನಕ್ಕೆ ಸಂತಾಪ ಸೂಚಿಸಿ ಕೇಂದ್ರ ಗೃಹ ಸಚಿವಾಲಯ ಭಾರತದಲ್ಲಿ ಇಂದಿನಿಂದ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಮಾತ್ರವಲ್ಲದೆ ಪೋಪ್‌ರ ಅಂತ್ಯಕ್ರಿಯೆ ದಿನದಂದೂ ಶೋಕ ಆಚರಿಸಲಾಗುವುದೆಂದು  ಗೃಹ ಸಚಿವಾಲಯ ತಿಳಿಸಿದೆ.

ಇದರಂತೆ ಭಾರತದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುತ್ತಿದೆ. ಶೋಕಾಚರಣೆಯ ಅವಧಿಯಲ್ಲಿ ಯಾವುದೇ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದಿಲ್ಲ. ಇದೇ ವೇಳೆ  ಮುನ್ನ ಪ್ರಧಾನಿ   ನರೇಂದ್ರ ಮೋದಿ ಪೋಪ್ ಫ್ರಾನ್ಸಿಸ್‌ರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದು,  ಅವರ ನಿಧನ ಜಾಗತಿಕ ಸಮುದಾಯಕ್ಕೆ ತೀವ್ರ ನಷ್ಟವಾಗಿದ. ಸೇವೆ, ಸಹಾನುಭೂತಿ ಮತ್ತು ಆಧ್ಯಾತ್ಮಿಕ ಧರ್ಮಕ್ಕೆ ಪೋಪ್ ಅವರ ಜೀವಮಾನ ಸಮರ್ಪಣೆಯನ್ನು  ಗುರುತಿಸಿ ವಿಶ್ವದಾದ್ಯಂತದ ಕೆಥೋಲಿಕ್ ಸಮುದಾಯದವರಿಗೆ ಪ್ರಧಾನಿ ತಮ್ಮ ಸಂತಾಪ ತಿಳಿಸಿದ್ದಾರೆ. ಪೋಪ್ ಫ್ರಾನ್ಸಿಸ್‌ರ ನಿಧನಕ್ಕೆ ವಿಶ್ವದಾದ್ಯಂತ ಎಲ್ಲಾ ದೇಶಗಳಿಂದಲೂ ಕಣ್ಣೀರ ಕೋಡಿ ಹರಿದುಬರತೊಡಗಿದೆ. ಅಂತ್ಯಕ್ರಿಯೆ ದಿನಾಂಕವನ್ನು  ಶೀಘ್ರ ತೀರ್ಮಾನಿಸುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

You cannot copy content of this page