ಪೌರತ್ವ ತಿದ್ದುಪಡಿ ಕಾನೂನು ಬಾಯಾರಿನಲ್ಲಿ ಎಡರಂಗ ಪ್ರತಿಭಟನೆ
ಬಾಯಾರು: ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಿದ ಕೇಂದ್ರ ಸರಕಾರದ ವಿರುದ್ಧ ಎಡರಂಗ ಬಾಯಾರು ಲೋಕಲ್ ಕಮಿಟಿ ವತಿಯಿಂದ ನಿನ್ನೆ ಸಂಜೆ ಬಾಯಾರು ಪದವು ನಲ್ಲಿ ಪ್ರತಿಭಟನೆ ನಡೆಯಿತು. ಸಿಪಿಎಂ ಲೋಕಲ್ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಬಳ್ಳೂರು ಉದ್ಘಾಟಿಸಿದರು. ವಿನಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಡರಂಗ ನೇತಾರರಾದ ಅಬ್ದುಲ್ ಸತ್ತಾರ್,ಸಿದ್ದೀಕ್ ಆವಳ, ಆಸ್ಪೀರ್ ಬಾಯಾರು, ಗಣೇಶ ಬಿ, ರಾಮಚಂದ್ರ ಮಾತನಾಡಿದರು. ರಹೀಂ ನಡುಮನೆ ಸ್ವಾಗತಿಸಿದರು.