ಪ್ರಕಾಶ್ ಕಾರಾಟ್ ಸಿಪಿಎಂ ಕೋರ್ಡಿನೇಟರ್
ಹೊಸದಿಲ್ಲಿ: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚ್ಚೂರಿಯವರ ನಿಧನದ ಹಿನ್ನೆಲೆಯಲ್ಲಿ ಪಕ್ಷದ ನೇತೃತ್ವದ ತಾತ್ಕಾಲಿಕ ಹೊಣೆಗಾರಿಕೆಯನ್ನು ಪಕ್ಷದ ಹಿರಿಯ ನೇತಾರ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಾಟ್‌ಗೆ ವಹಿಸಿ ಕೊಡಲಾಗಿದೆ.
ದಿಲ್ಲಿಯಲ್ಲಿ ನಡೆದ ಸಿಪಿಎಂ ಪೋಲಿಟ್ ಬ್ಯೂರೋ ಮತ್ತು ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಪೋಲಿಟ್ ಬ್ಯೂರೋ ಮತ್ತು ರಾಷ್ಟ್ರೀಯ ಸಮಿತಿಯ ಉಸ್ತುವಾರಿ ಹೊಣೆಗಾರಿಕೆಯನ್ನು ಕೋರ್ಡಿನೇಟರ್ (ಸಂಚಾಲಕ) ಎಂಬ ನೆಲೆಯಲ್ಲಿ ಪ್ರಕಾಶ್ ಕಾರಾಟ್‌ರಿಗೆ ವಹಿಸಿಕೊಡ ಲಾಗಿದೆ.