ಪ್ರತಾಪನಗರ ಗೌರೀ ಗಣೇಶ ಮಹಿಳಾ ಸಂಘದ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಮಂಗಲ್ಪಾಡಿ: ಪ್ರತಾಪನಗರ ಗೌರೀ ಗಣೇಶ ಮಹಿಳಾ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಕಾರ್ಯಾಲಯದಲ್ಲಿ ನಡೆಯಿತು. ನೂತನ ಅಧ್ಯಕ್ಷೆ ಯಾಗಿ ವಿಜಯಲಕ್ಷಿ÷್ಮÃ ಬಾಲಕೃಷ್ಣ, ಉಪಾಧ್ಯಾಕ್ಷೆಯಾಗಿ ಜಯಂತಿ ಪ್ರವೀಣ, ಪ್ರಧಾನ ಕಾರ್ಯದರ್ಶಿಯಾಗಿ ಜಯಲಕ್ಷಿ÷್ಮÃ ವೀರಪ್ಪ, ಜತೆ ಕಾರ್ಯದರ್ಶಿಯಾಗಿ ಸರಿತ ಅನಿಲ್, ಕೋಶಾಧಿಕಾರಿಯಾಗಿ ಜಯ ದಿವಾಕರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯೆಯರಾಗಿ ಹರಿಣಾಕ್ಷಿ, ಶಶಿಪ್ರಭ, ಸುಶೀಲ, ಸುರೇಖ, ವೀಣಾ ಹರಿಶ್ಚಂದ್ರ, ರಜನಿ ಚಂದ್ರಹಾಸ, ವತ್ಸಲ ಸುರೇಶ್, ಶೀನ ಕಮಲಾಕ್ಷ ಇವರು ಆಯ್ಕೆಯಾದರು. ಮಾಜಿ ಅಧ್ಯಕ್ಷೆ ಹರಿಣಾಕ್ಷಿ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ ಸುಶೀಲ ನಾರಾಯಣ ವಂದಿಸಿದರು.