ಪ್ರತಾಪನಗರ ರಸ್ತೆಯಲ್ಲಿ ತುಂಬಿಕೊಂಡ ಮಳೆನೀರು : ವಾಹನ ಸಹಿತ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ

ಉಪ್ಪಳ: ಚರಂಡಿಯ ಅವ್ಯವಸ್ಥೆ ಯಿಂದಾಗಿ ಮಳ ನೀರು ಹರಿದು ಹೋಗದೆ ತುಂಬಿಕೊಂಡು ಹೊಳೆ ಯಂತಾಗಿ ವಾಹನ ಸಹಿತ ಪಾದಚಾರಿ ಗಳ ಸಂಚಾರಕ್ಕೆ ಪ್ರತಾನಗರ ರಸ್ತೆಯಲ್ಲಿ ತೊಡಕು ಉಂಟಾಗುತ್ತಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮೇಲಿನ ಸೋಂಕಾಲು-ಪ್ರತಾಪನಗರದ ಲೋಕೋಪಯೋಗಿ ಇಲಾಖೆ ರಸ್ತೆಯ ಅಲ್ಲಲ್ಲಿ ಚರಂಡಿಯನ್ನು ಶುಚೀಕರಣ ಗೊಳಿಸದೆ ಮಣ್ಣು, ಕಸಕಡ್ಡಿಗಳು ತುಂಬಿ ಮಳಗಾಲದಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಪ್ರತಾಪನಗರದ ರಸ್ತೆಯ ಅಂಬೇಡ್ಕರ್ ಕಲಾ ವೇದಿಕೆ ಸಮೀಪದಲ್ಲಿ ಭಾರೀ ಪ್ರಮಾಣದ ನೀರು ತುಂಬಿ ಹೊಳೆಯಂತಾಗಿ ವಾಹನ ಸಹಿತ ನಡೆದು ಹೋಗಲು ಅಸಾಧ್ಯವಾಗಿದ್ದು, ಸ್ಥಳೀಯರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ವಾಹನ ಸಂಚಾರದ ವೇಳೆ ಪಾದಚಾರಿಗಳ ಮೈ ಮೇಲೆ ಕೆಸರು ನೀರು, ಶಾಲೆ, ಕೆಲಸಗಳಿಗೆ ತೆರಳುವವರು ಧರಿಸಿದ ಬಟ್ಟೆಗೆ ಎರಚಲ್ಪಡುತ್ತಿದೆ. ಚರಂಡಿಯನ್ನು ನಿರ್ಮಿಸುವುದು ಅಥವಾ ಶುಚೀಕರಣಗೊಳಿಸದಿರುವುದೇ ಇದಕ್ಕೆ ಕಾರಣವೆಂದು ಊರವರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page