ಪ್ರಧಾನಮಂತ್ರಿ ಪಾಲಕ್ಕಾಡ್ನಲ್ಲಿ ಬೃಹತ್ ರೋಡ್ಶೋ
ಪಾಲಕ್ಕಾಡ್: ಲೋಕಸಭಾ ಚುನಾವಣಾ ಪ್ರಚಾರದಂಗವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಯವರು ಇಂದು ಮತ್ತೆ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ಬೆಳಿಗ್ಗೆ ಅವರು ಪಾಲಕ್ಕಾಡ್ಗೆ ಆಗಮಿಸಿದ್ದು, ಅವರಿಗೆ ಪಕ್ಷದ ನೇತಾರರು, ಕಾರ್ಯಕರ್ತರು ಅದ್ದೂರಿಯ ಸ್ವಾಗತ ನೀಡಿದರು. ಪಾಲಕ್ಕಾಡ್ನ ಎನ್ಡಿಎ ಅಭ್ಯರ್ಥಿ ಸಿ. ಕೃಷ್ಣ ಕುಮಾರ್ರ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ಆಗಮಿಸಿದ್ದಾರೆ. ಬೆಳಿಗ್ಗೆ ೧೦.೧೫ರ ವೇಳೆ ಪಾಲಕ್ಕಾಡ್ ಮೇರ್ಸಿ ಕಾಲೇಜಿನ ಹೆಲಿಪ್ಯಾಡ್ನಲ್ಲಿಳಿದ ಪ್ರಧಾನಮಂತ್ರಿ ಅಲ್ಲಿಂದ ರಸ್ತೆ ಮೂ ಲಕ ಅಂಜುವಿಳಕ್ಗೆ ತೆರಳಿದರು. ಅಲ್ಲಿಂದ ಪ್ರಧಾನ ಅಂಚೆ ಕಚೇರಿವರೆಗಿನ ಒಂದು ಕಿಲೋ ಮೀಟರ್ ದೂರಕ್ಕೆ ರೋಡ್ ಶೋ ನಡೆಸಿದರು. ಚುನಾವಣೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ಕೇರಳಕ್ಕೆ ಆಗಮಿಸಿದ್ದಾರೆ.
ಇತ್ತೀಚೆಗೆ ಪತ್ತನಂತಿಟ್ಟಕ್ಕೆ ಆಗಮಿಸಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಗೆಲುವು ಸಾಧಿಸ ಲೇಬೇಕೆಂಬ ದೃಢ ನಿರ್ಧಾರ ದೊಂದಿಗೆ ಬಿಜೆಪಿ ಚಟುವಟಿಕೆ ನಡೆಸುತ್ತಿದೆ.
ಮುಂದಿನ ದಿನಗಳಲ್ಲಿ ಬಿಜೆಪಿಯ ಹಿರಿಯ ನೇತಾರರು ಆಗಮಿಸುವ ಸಾಧ್ಯತೆ ಇದೆ. ಪಾಲಕ್ಕಾಡ್ನಲ್ಲಿ ಇಂದಿನ ಕಾರ್ಯಕ್ರಮದ ಬಳಿಕ ನರೇಂದ್ರಮೋದಿ ತಮಿಳುನಾಡಿಗೆ ತೆರಳುವರು. ಸೇಲಂನಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸುವರು.