ಪ್ರಯಾಣ ಮೊಟಕುಗೊಂಡವರಿಗೆ ನಷ್ಟ ಪರಿಹಾರ ಲಭ್ಯಗೊಳಿಸಲು ಮುಹಿಮ್ಮಾತ್ ಪ್ರವಾಸಿ ಸಂಗಮ ಆಗ್ರಹ

ಪುತ್ತಿಗೆ: ಏರ್ ಇಂಡಿಯಾ ವಿಮಾನ ಕಂಪೆನಿ ನೌಕರರ ಕೆಲಸ ಸ್ಥಗಿತ ಮುಷ್ಕರದಿಂದಾಗಿ ಪ್ರಯಾಣ ಮೊಟಕುಗೊಂಡು ಕೆಲಸಕ್ಕೆ ತಲುಪಲು ಸಾಧ್ಯವಾಗದೆ ಅನಿರೀಕ್ಷಿತವಾಗಿ ಸಂಭವಿಸಿದ ಪ್ರಯಾಣ ಮೊಟಕಿನಿಂದ ಕೆಲಸ ಕಳೆದುಕೊಂಡ ಘಟನೆಯಲ್ಲಿ ನಷ್ಟಪರಿಹಾರ ನೀಡಬೇಕೆಂದು ಮುಹಿಮ್ಮಾತ್ ಪ್ರವಾಸಿ ಸಂಗಮ ಆಗ್ರಹಿಸಿದೆ. ದಿಢೀರ್ ಆಗಿ ವಿಮಾನ ಸಂಚಾರ ಮೊಟಕುಗೊಳಿಸಿರುವುದರಿಂದ ಹಲವಾರು ಅನಿವಾಸಿಗಳು ಸಮಸ್ಯೆಗೀಡಾಗಿದ್ದಾರೆ.  ಅನಿವಾಸಿಗಳಿಗುಂಟಾಗುತ್ತಿರುವ ಈ ರೀತಿಯ ಸಮಸ್ಯೆಗಳಿಗೆ ಸರಕಾರ ತುರ್ತಾಗಿ ಮಧ್ಯ ಪ್ರವೇಶಿಸಿ ಪರಿಹಾರ ಉಂಟುಮಾಡಬೇಕೆಂದು  ಸಂಗಮ ಆಗ್ರಹಿಸಿದೆ.

ಮುಹಿಮ್ಮಾತ್ ಕೋಶಾಧಿಕಾರಿ ಶಾಜಿ ಅಮೀರಲಿ ಅಧ್ಯಕ್ಷತೆ ವಹಿಸಿದರು. ಎಸ್‌ಎಸ್‌ಎಫ್ ರಾಜ್ಯ ಫಿನಾನ್ಸ್ ಕಾರ್ಯದರ್ಶಿ ಮುನೀರ್ ಅಲ್ ಅಹ್ದಲ್ ತಂಙಳ್ ಉದ್ಘಾಟಿಸಿದರು. ಹಲವರು ಭಾಗವಹಿಸಿದರು.

You cannot copy contents of this page