ಪ್ರವಾಸಿ ತಂಡ ಸಂಚರಿಸಿದ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ನಾಲ್ಕು ಮಂದಿ ಸಾವು
ಇಡುಕ್ಕಿ: ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿ ನಾಲ್ಕು ಮಂದಿ ಮೃತಪಟ್ಟ ದಾರುಣ ಘಟನೆ ಇಡುಕ್ಕಿ ಪುಲ್ಲುಪಾರ ಎಂಬಲ್ಲಿಗೆ ಸಮೀಪ ಸಂಭವಿಸಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಓರ್ವ ಪುರುಷ ಹಾಗೂ ಮೂವರು ಮಹಿಳೆಯರಾಗಿದ್ದರೆ.
ಇಂದು ಬೆಳಿಗ್ಗೆ 6 ಗಂಟೆ ವೇಳೆ ಅಪಘಾತವುಂಟಾಗಿದೆ. ತಂಜಾವೂರಿಗೆ ಪ್ರವಾಸ ತೆರಳಿ ಮರಳಿ ಬರುತ್ತಿದ್ದಾಗ ಮಾವೇಲಿಕ್ಕರ ನಿವಾಸಿಗಳು ಸಂಚರಿಸಿದ ಬಸ್ ಅಪಘಾತಕ್ಕೀಡಾಗಿದೆ. ಬ್ರೇಕ್ ವೈಫಲ್ಯಗೊಂಡಿರುವುದೇ ಅಪಘಾತಕ್ಕೆ ಕಾರಣವೆನ್ನಲಾಗುತ್ತಿದೆ.
ಕುಟ್ಟಿಕ್ಕಾನ ಹಾಗೂ ಮುಂಡಕ್ಕಯಕ್ಕೆ ಮಧ್ಯೆ 30 ಅಡಿ ಆಳಕ್ಕೆ ಬಸ್ ಮಗುಚಿ ಬಿದ್ದಿದೆ. ರಸ್ತೆಯಿಂದ ಮಗುಚಿದ ಬಸ್ ಮರವೊಂದರಲ್ಲಿ ಸಿಲುಕಿಕೊಂಡಿತ್ತು. ಅಪಘಾತದ ಸದ್ದು ಕೇಳಿ ತಲುಪಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ತಲುಪಿ ಬಸ್‌ನೊಳಗೆ ಸಿಲುಕಿಕೊಂಡವರನ್ನು ಹೊರತೆಗೆದಿದ್ದಾರೆ. ಮೂವರು ಘಟನೆ ಸ್ಥಳದಲ್ಲಿ ಹಾಗೂ ಓರ್ವ ಆಸ್ಪತ್ರೆಗೆ ತಲುಪಿಸುತ್ತಿದ್ದಂತೆ ಮೃತಪಟ್ಟಿದ್ದಾರೆ.