ಪ್ರೇಯಸಿಯನ್ನು ಕೊಂದು ಪ್ರೇಮಿ ಆತ್ಮಹತ್ಯೆ
ಬೆಳಗಾವಿ: ಪ್ರೇಯಸಿಯನ್ನು ಹತ್ಯೆಗೈದು ಪ್ರೇಮಿಯೂ ಸಾವಿಗೆ ಶರಣಾದ ಘಟನೆ ಜಿಲ್ಲೆಯ ಶಹಾಪುರ ನಾಥಪೈ ಸರ್ಕಲ್‌ನಲ್ಲಿ ನಡೆದಿದೆ. ಬೆಳಗಾವಿ ಯಲ್ಲೂರ ಗ್ರಾಮದ ಪ್ರಶಾಂತ ಕುಂಡೇಕರ್ (29), ಐಶ್ವರ್ಯ ಲೋಹರ ಮೃತಪಟ್ಟವರು. ಯುವತಿಯ ಚಿಕ್ಕಮ್ಮನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ. ಐಶ್ವರ್ಯಳನ್ನು ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೈದ ಬಳಿಕ ತನ್ನ ಕುತ್ತಿಗೆಗೆ ಇರಿದುಕೊಂಡು ಯುವಕ ಸಾವಿಗೆ ಶರಣಾಗಿದ್ದಾನೆ. ಕಳೆದೊಂದು ವರ್ಷದಿಂದ ಇವರಿಬ್ಬರೂ ಪ್ರೀತಿಸುತ್ತಿದ್ದರೆನ್ನಲಾಗಿದೆ. ಪ್ರಶಾಂತ್ ಪೈಂಟರ್ ಆಗಿದ್ದಾನೆ. ನಗರ ಪೊಲೀಸ್ ಆಯುಕ್ತ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಚಾಲನೆ ನೀಡಿದ್ದಾರೆ.