ಪ್ಲಾಸ್ಟಿಕ್‌ಗೆ ಬೆಂಕಿ ಪಂ.ಅಧಿಕಾರಿಗಳಿಂದಲೇ ಆರೋಪಿಗಳ ಪತ್ತೆ

ಮುಳಿಯಾರು: ಪಂಚಾಯ ತ್‌ನ ಒಂದನೇ ವಾರ್ಡ್ ವ್ಯಾಪ್ತಿಯ ಮಾಸ್ತಿಕುಂಡ್ ಚೂರಿಮೂಲೆಯಲ್ಲಿ ಇತರ ಸ್ಥಳಗಳಿಂದ ತಂದ ಪ್ಲಾಸ್ಟಿಕ್ ಸಹಿತದ ತ್ಯಾಜ್ಯವನ್ನು ಉರಿಸುತ್ತಿರುವು ದನ್ನು ಪಂಚಾಯತ್ ಅಸಿಸ್ಟೆಂಟ್ ಸೆಕ್ರೆಟರಿ ಪಿ.ವಿ. ಶ್ರೀನಿವಾಸನ್‌ರ ನೇತೃತ್ವದಲ್ಲಿ ನೌಕರರು ನೇರವಾಗಿ ತಲುಪಿ ಪತ್ತೆ ಹಚ್ಚಿದರು.  ಆರೋಪಿಗಳನ್ನು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇತರ ಸ್ಥಳಗಳಿಂದ ತ್ಯಾಜ್ಯಗಳನ್ನು ವಾಹನಗಳಲ್ಲಿ ತಂದು ಹಾಕಿ ಇಲ್ಲಿ ಉರಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ  ಪಂಚಾಯತ್ ಅಧಿಕಾರಿಗಳು ರಾತ್ರಿ ವೇಳೆ ಸ್ಥಳಕ್ಕೆ ತಲುಪಿದ್ದಾರೆ. ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಗಳ ವಿರುದ್ಧ ಕೇಸು ದಾಖಲಿಸಿದರು. ಈ ರೀತಿಯಲ್ಲಿ ತ್ಯಾಜ್ಯ ಉರಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಪಂ. ಕಾರ್ಯದರ್ಶಿ ತಿಳಿಸಿದ್ದಾರೆ.

RELATED NEWS

You cannot copy contents of this page