ಫಂಡ್ ವಂಚನೆ: ಕುಂಬಳೆ ಪಂ. ಕಚೇರಿಗೆ ಡಿವೈಎಫ್‌ಐ ಮಾರ್ಚ್
ಕುಂಬಳೆ: ಕುಂಬಳೆ ಪಂಚಾಯತ್‌ನಲ್ಲಿ ನಡೆದ ಲಕ್ಷಾಂತರ ರೂಪಾಯಿಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಪಂಚಾಯತ್ ಕಚೇರಿಗೆ ನಿನ್ನೆ ಮಾರ್ಚ್ ನಡೆಸಿತು. ಪಂಚಾಯತ್ ಕಚೇರಿಯ ಮುಂದೆ ಮಾರ್ಚ್‌ಗೆ ಪೊಲೀಸರು ತಡೆಯೊಡ್ಡಿದರು. ವಂಚನೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಮಾರ್ಚ್ ನಿರತರು ಒತ್ತಾಯಿಸಿದರು. ಕುಂಬಳೆ ಪೇಟೆಯಿಂದ ಆರಂಭಿಸಿದ ಮೆರವಣಿಗೆಯನ್ನು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ರಘುದೇವನ್ ಮಾಸ್ತರ್ ಉದ್ಘಾಟಿಸಿದರು. ಇರ್ಷಾದ್, ಕೆ.ಎಂ. ಮುನೀರ್ ಎಂಬಿವರು ನೇತೃತ್ವ ವಹಿಸಿದರು.