ಫಾತಿಮತ್ ಸುಹರಾಳನ್ನು ಕೊಂದದ್ದು ಅಸೈನಾರ್-ಪೊಲೀಸ್

ಕಾಸರಗೋಡು: ಹೊಸದುರ್ಗ ನೋರ್ತ್ ಕೋಟಚ್ಚೇರಿಯ ಅವಿಯಿಲ್ ಅಪಾರ್ಟ್‌ಮೆಂಟ್ ನಲ್ಲಿ ನೆಲ್ಲಿಕಟ್ಟೆ ನಿವಾಸಿ ಫಾತಿಮತ್ತ್ ಸುಹರಾ (42)ಳನ್ನು ಕೊಲೆಗೈದಿದ್ದು ಆಕೆಯ ಪ್ರಿಯತಮ ಚೆಂಗಳ ರಹಮ್ಮತ್ ನಗರದ ಕನಿಯಡ್ಕದ ಅಸೈನಾರ್ (33)ನೇ ಆಗಿರುವುದಾಗಿ ತನಿಖೆಯ ಲ್ಲಿ ಸ್ಪಷ್ಟಗೊಂಡಿದೆಯೆಂದು ಹೊಸ ದುರ್ಗ ಪೊಲೀಸರು ತಿಳಿಸಿದ್ದಾರೆ.

ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ  ಫಾತಿಮ್ಮತ್ ಸುಹರಾಳ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಅದರ ವರದಿಯಲ್ಲಿ ಫಾತಿಮ್ಮತ್ ಸುಹರಾಳ ಸಾವು ಕೊಲೆಯಾಗಿದೆ ಯೆಂಬುವುದು ಸ್ಪಷ್ಟಗೊಂಡಿದೆ. 

  ಕುತ್ತಿಗೆಗೆ ಇರಿದು ಮತ್ತು ತಲೆಗೆ ಗಂಭೀರ ಗಾಯಗೊಂಡಿರುವುದೇ ಫಾತಿಮ್ಮತ್ ಸುಹರಾಳ ಸಾವಿಗೆ ಪ್ರಧಾನ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕೋಟ್ಟಚ್ಚೇರಿ ಅವಿಯಿಲ್ ಅಪಾರ್ಟ್‌ಮೆಂಟ್‌ನ ಹೊರಗಿನಿಂದ ಬೀಗ ಜಡಿದ ಕೊಠಡಿಯೊಳಗೆ ಸುಹರಾಳ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಜುಲೈ ೨ರಂದು ಪತ್ತೆಯಾಗಿತ್ತು.  ಅದರ ಮೂರು ದಿನಗಳ ಹಿಂದೆ ಆಕೆ ಯನ್ನು ಅಲ್ಲೇ ಕೊಲೆಗೈಯ್ಯಲಾಗಿತ್ತೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

ಕೊಲೆ ಬಳಿಕ ಆಕೆಯ ಪ್ರಿಯತಮ ಅಸೈನಾರ್ (33) ಜುಲೈ 1ರಂದು ಕಾಸರಗೋಡಿಗೆ ಬಂದು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ವಸತಿಗೃಹ ವೊಂದರಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡಿದ್ದನು. ಅದೇ ದಿನ ಆತ ಅದೇ ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.

RELATED NEWS

You cannot copy contents of this page