ಫೆಡರಲ್ ಬ್ಯಾಂಕ್ ಕಳವು: ಆರೋಪಿ ಸೆರೆ

ತೃಶೂರು: ಫೆಡರಲ್ ಬ್ಯಾಂಕ್‌ನ ಪೋಟ ಶಾಖೆಯಲ್ಲಿ ಹಾಡಹಗಲು ಕಳವು ನಡೆಸಿದ ಪ್ರಕರಣದ ಆರೋಪಿ ಸೆರೆಯಾಗಿದ್ದಾನೆ. ಚಾಲಕ್ಕುಡಿ ನಿವಾಸಿ ರಿಜೋ ಸೆರೆಯಾದ ವ್ಯಕ್ತಿ. ಈತನಿಂದ 10 ಲಕ್ಷ ರೂ.ವನ್ನು ವಶಪಡಿಸಲಾಗಿದೆ. ಸಾಲ ತೀರಿಸಲು ದರೋಡೆ ನಡೆಸಿರುವುದಾಗಿ ಈತ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ತೃಶೂರು ರೂರಲ್ ಪೊಲೀಸ್ ಈತನನ್ನು ಬಂಧಿಸಿದೆ.  ಶುಕ್ರವಾರ ಮಧ್ಯಾಹ್ನ ಕಳವು ನಡೆಸಲಾಗಿದೆ. ಹೆಲ್ಮೆಟ್, ಮಾಸ್ಕ್ ಧರಿಸಿ ಸ್ಕೂಟರ್‌ನಲ್ಲಿ ತಲುಪಿದ ಈತ ಬ್ಯಾಂಕ್‌ನ ಒಳಗೆ ನುಗ್ಗಿ ಕ್ಯಾಶ್ ಕೌಂಟರ್ ಸಮೀಪದಲ್ಲಿದ್ದ ಇಬ್ಬರು ನೌಕರರನ್ನು ಹಾಗೂ ಆಹಾರ ಸೇವಿಸುತ್ತಿದ್ದವರನ್ನೆಲ್ಲಾ ಕೋಣೆಯೊಳಗೆ ಬಂಧಿಸಿದ ಬಳಿಕ ಕಳವು ನಡೆಸಿದ್ದಾನೆ. ಬಳಿಕ ಕತ್ತಿತೋರಿಸಿ ಬೆದರಿಸಿ, ಕ್ಯಾಶ್‌ಕೌಂಟರ್‌ನಲ್ಲಿದ್ದ 5 ಲಕ್ಷದ 5೦೦ರ ಮೂರು ನೋಟುಕಟ್ಟುಗಳನ್ನು ಹಾಗೂ ಬಾಕಿ ಉಳಿದಿದ್ದ 20,000ದಷ್ಟು ರೂ.ವನ್ನು ಬ್ಯಾಗ್‌ನಲ್ಲಿ ಹಾಕಿ ಪರಾರಿಯಾಗಿದ್ದಾನೆ. 36 ಗಂಟೆಗಳ ತನಿಖೆಯ ಬಳಿಕ ಈತನನ್ನು ಸೆರೆ ಹಿಡಿಯಲಾಗಿದೆ.

RELATED NEWS

You cannot copy contents of this page