ಕಾಸರಗೋಡು: ಫ್ಯಾಬ್ರಿಕೇಶನ್ ಕಾರ್ಮಿಕನಾದ ಯುವಕ ಮನೆ ಯೊಳಗೆ ನೇಣುಬಿಗಿದು ಸಾವನ್ನ ಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹೊಸದುರ್ಗ ಬಳಾಲ್ ಅರಿಂ ಕಲ್ಲಿನ ನಾರಾಯಣನ್-ಕಾರ್ತ್ಯಾ ಯಿನಿ ದಂಪತಿಯ ಪುತ್ರ ಪ್ರಕಾಶನ್ (35) ಸಾವನ್ನಪ್ಪಿದ ಯುವಕ. ನಿನ್ನೆ ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅದನ್ನು ಕಂಡ ಮನೆಯವರು ಹಗ್ಗ ತುಂಡರಿಸಿ ಪರಪ್ಪ ಕಾರುಣ್ಯ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ಪ್ರಕಾಶನ್ರ ಪ್ರಾಣಪಕ್ಷಿ ಹಾರಿಹೋಗಿತ್ತು.
ಮೃತದೇಹವನ್ನು ನಂತರ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಮೃತರು ಹೆತ್ತವರ ಹೊರತಾಗಿ ಸಹೋದರ ಪ್ರಸಾದ್, ಸಹೋದರಿ ಪ್ರಸೀದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.