ಬಂಗಾಳಕೊಲ್ಲಿಯಲ್ಲಿ ಪ್ರಬಲ ಭೂಕಂಪ: ಕೊಲ್ಕತ್ತಾ ಸಹಿತ ಕಂಪಿಸಿದ ಪಶ್ಚಿಮಬಂಗಾಲ
ಕೋಲ್ಕತ್ತಾ: ಬಂಗಾಳಕೊಲ್ಲಿಯಲ್ಲಿ ಇಂದು ಬೆಳಿಗ್ಗೆ 6.50ರ ವೇಳೆ ಭೂಕಂಪ ಸಂಭವಿಸಿದೆ. ಇದರಿಂದಾಗಿ ಕೋಲ್ಕತ್ತಾ ನಗರ ಮಾತ್ರವಲ್ಲದೆ ಪಶ್ಚಿಮ ಬಂಗಾಲ ರಾಜ್ಯದ ಹಲವಾರು ಭಾಗಗಳ ಭೂಮಿ ನಡುಗಿದೆ. ರಿಕ್ಟರ್ ಸ್ಕೇಲ್ನಲ್ಲಿ ಭೂಕಂಪದ ತೀವ್ರತೆ 5.1 ಆಗಿರುವುದಾಗಿ ದಾಖಲುಗೊಂಡಿದೆಯೆAದು ರಾಷ್ಟ್ರೀಯ ಭೂಕಂಪ ಶಾಸ್ತ್ರಕೇಂದ್ರ (ಎನ್ಸಿಎಸ್) ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ 91 ಕಿ.ಮೀ. ಆಳದಲ್ಲಿ ಭೂಕಂಪವಾಗಿದೆ. ಅಕ್ಷಾಂಶ 9.52 ಮತ್ತು ರೇಖಾಂಶ 86.55 ಪೂರ್ವದಲ್ಲಿ ಭೂಕಂಪ ದಾಖಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪ ಕೋಲ್ಕತ್ತಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಭೀತಿ ಆವರಿಸುವಂತೆ ಮಾಡಿದೆ. ಆದರೆ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿ ಹೊರಬಂದಿಲ್ಲ. ಭೂಕಂಪದ ಕೇಂದ್ರ ಬಿಂದು ಒಡಿಶಾದಿಂದ 175 ಕಿ.ಮೀ. ದೂರದಲ್ಲಿರಬಹುದೆಂದು ವರದಿಗಳು ಸೂಚಿಸುತ್ತಿವೆ. ಮಾತ್ರವಲ್ಲದೆ ಈ ಬಗ್ಗೆ ಜನರಲ್ಲಿ ಭಾರೀ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.