‘ಬಂಟೆರೆ ಆಟಿದ ಕೂಟ’ 11ರಂದು
ಬದಿಯಡ್ಕ: ಬಂಟರ ಸಂಘ ಬದಿಯಡ್ಕ ಇದರ ಆಶ್ರಯದಲ್ಲಿ ಬಂಟೆರೆ ಆಟಿದ ಕೂಟ ಈ ತಿಂಗಳ 11ರಂದು ಅಪರಾಹ್ನ 2 ಗಂಟೆಗೆ ನವಜೀವನ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಉದ್ಘಾಟಿಸುವರು. ಬದಿಯಡ್ಕ ಘಟಕದ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸುವರು. ದಯಾನಂದ ರೈ ಕಳ್ವಾಜೆ ಉಪನ್ಯಾಸ ನೀಡುವರು. ಚಂದ್ರಹಾಸ ರೈ ಪೆರಡಾಲಗುತ್ತು, ಶ್ಯಾಮಲ ಶೆಟ್ಟಿ ಕಾಸರಗೋಡು, ಪದ್ಮನಾಭ ಶೆಟ್ಟಿ ವಳಮಲೆ ಅತಿಥಿಗಳಾಗಿ ಭಾಗವಹಿಸುವರು. ಇದೇ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ. ಅಶೋಕ್ ರೈ ಕೊರೆಕ್ಕಾನ, ರವೀಂದ್ರನಾಥ ಶೆಟ್ಟಿ ವಳಮಲೆ, ಗಿರೀಶ್ ರೈ ವಳಮಲೆ, ಜಗನ್ನಾಥ ರೈ ಕೊರೆಕ್ಕಾನ, ನವೀನ್ ಶೆಟ್ಟಿ ಬೇಳ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ದಯಾನಂದ ರೈ ಮೇಗಿನಕಡಾರು, ಅಶ್ವಿನಿ ಪ್ರದೀಪ್ ಶೆಟ್ಟಿ ಭಾಗವಹಿಸುವರು.