ಬಂದೂಕು ತೋರಿಸಿ ಬೆದರಿಸಿ ಕ್ರಷರ್ ಮೆನೇಜರ್ರ 12.30 ಲಕ್ಷ ರೂ. ಲಪಟಾವಣೆ ; ಘಟನೆ ನಡೆದ ತಾಸುಗಳೊಳಗಾಗಿ ಆರೋಪಿಗಳನ್ನು ಸೆರೆಹಿಡಿದ ಪೊಲೀಸರು
ಕಾಸರಗೋಡು: ಕ್ರಷರ್ ಮೆನೇ ಜರ್ಗೆ ಬಂದೂಕು ತೋರಿಸಿ ಬೆದರಿಸಿ ಅವರ ಕೈಯಲ್ಲಿದ್ದ 12.30 ಲಕ್ಷ ರೂ. ಒಳಗೊಂಡ ಬ್ಯಾಗ್ನ್ನು ಎಗರಿಸಿ ಪರಾರಿಯಾದ ಆರೋಪಿಗ ಳಾದ ನಾಲ್ವರನ್ನು ಪೊಲೀಸರು ನಡೆಸಿದ ಸಕಾಲಿಕ ಕಾರ್ಯಾಚರಣೆಯಲ್ಲಿ ಘಟನೆ ನಡೆದ ತಾಸುಗಳೊಳಗಾಗಿ ಬಂಧಿಸ ಲಾಗಿದೆ.
ಬಿಹಾರ ಕತ್ಯಾರ್ ಜಿಲ್ಲೆಯ ಸಿಮರ್ಪುರ್ ಗ್ರಾಮದ ಬಂಕ್ ನಿವಾಸಿ ಇಬ್ರಾನ್ ಅಸ್ಲಾಂ (21), ಇದೇ ಗ್ರಾಮದ ಮೊಹಮ್ಮದ್ ಫಾರೂಕ್ (30), ಸಿಮರ್ಪುರ್ ಬರಾರಿ ಪೊಲೀಸ್ ಠಾಣೆಗೊಳಪಟ್ಟ ಹಕೀಂ ಟೋಲ್ ನಿವಾಸಿ ಮೊಹಮ್ಮದ್ ಮಾಲೀಕ್ ಅಲಿಯಾಸ್ ಎಂ.ಡಿ. ಮಾಲೀಕ್ (21) ಮತ್ತು ಅಸ್ಸಾಂನ ಹಜೋಯ್ ಜಿಲ್ಲೆಯ ತರಲಂಗಾಶು ವಿಲನ್ಪುರ್ ಗ್ರಾಮ ನಿವಾಸಿ ಧನಂಜಯ ಬೋರಾ (22) ಬಂಧಿತರಾದ ಆರೋಪಿಗಳು.
ಹೊಸದುರ್ಗ ಕಲ್ಯಾಣ್ ರೋಡ್ನಲ್ಲಿ ಜಾಸ್ ಗ್ರಾನೈಟ್ ಎಂಬ ಕ್ರಷರ್ ಸಂಸ್ಥೆಯ ಮೆನೇಜರ್ ಕಲ್ಲಿಕೋಟೆ ನಿವಾಸಿ ರವೀಂದ್ರನ್ ಎಂಬವರ ಹಣವನ್ನು ಆರೋಪಿಗಳು ಎಗರಿಸಿದ್ದರು. ಕ್ರಷರ್ನಿಂದ ಹೊಸದುರ್ಗದಲ್ಲಿರುವ ತಮ್ಮ ವಾಸಸ್ಥಳಕ್ಕೆ ನಿನ್ನೆ ರವೀಂದ್ರನ್ ಹೋಗುತ್ತಿದ್ದ ದಾರಿ ಮಧ್ಯೆ ನಾಲ್ವರು ಅಕ್ರಮಿಗಳ ತಂಡ ಅವರನ್ನು ತಡೆದು ನಿಲ್ಲಿಸಿ ಬಂದೂಕು ತೋರಿಸಿ ಬೆದರಿಸಿ ಅವರ ಕೈಯಲ್ಲಿದ್ದ ಹಣ ಒಳಗೊಂಡ ಬ್ಯಾಗ್ ಅಪಹರಿಸಿ ವಾಹನವೊಂ ದರಲ್ಲಿ ಪರಾರಿಯಾಗಿತ್ತು. ತಕ್ಷಣ ರವೀಂದ್ರನ್ ನೀಡಿದ ದೂರಿ ನಂತೆ ಹೊಸದುರ್ಗ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್, ಎಸ್ಐ ಗಳಾದ ಶಾರಂಗ್ಧರನ್ ಮತ್ತು ಜೋಜೋರನ್ನೊಳಗೊಂಡ ಪೊಲೀಸರ ತಂಡ ಆ ಪರಿಸರದ ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ಹೊಸದುರ್ಗ ರೈಲ್ವೇ ನಿಲ್ದಾಣದತ್ತ ಸಾಗಿರುವುದಾಗಿ ಮಾಹಿತಿ ಲಭಿಸಿದೆ. ಅದರಂತೆ ಪೊಲೀಸರು ಅಲ್ಲಿಗೆ ಸಾಗಿ ದಾಗ ಆರೋಪಿಗಳು ತಮ್ಮ ವಾಹನ ವನ್ನು ಅಲ್ಲೇ ಬಿಟ್ಟು ಪರಾರಿಯಾ ಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಅವರು ಆ ಬಗ್ಗೆ ಕಾಸರಗೋಡು ಮತ್ತು ಮಂಗಳೂರು ರೈಲ್ವೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಹೊಸದುರ್ಗದಿಂದ ರೈಲು ಮೂಲಕ ಸಂಚರಿಸಿ ಮಂಗಳೂರಿನಲ್ಲಿ ಇಳಿದು ತಪ್ಪಿಸಿಕೊ ಳ್ಳಲೆತ್ನಿಸಿದ ಆರೋಪಿಗಳನ್ನು ಅಲ್ಲಿನ ಪೊಲೀಸರ ಸಹಾಯ ದಿಂದಲೇ ತಾಸುಗಳೊಳಗಾಗಿ ಬಂಧಿ ಸುವಲ್ಲಿ ಸಫಲರಾಗಿದ್ದಾರೆ.