ಬಂದೂಕು ಸಹಿತ ಉಪ್ಪಳ ನಿವಾಸಿ ಗುಜರಾತ್‌ನಲ್ಲಿ ಸೆರೆ

ಕುಂಬಳೆ: ದೇಶ ಚುನಾವಣೆ ಪ್ರಕ್ರಿಯೆಯತ್ತ ಸಾಗುತ್ತಿರುವಾಗಲೇ ಉಪ್ಪಳ ನಿವಾಸಿಯೋರ್ವ ಗುಜರಾತ್‌ನಲ್ಲಿ ಬಂದೂಕು ಸಹಿತ ಸೆರೆಗೀಡಾಗಿದ್ದಾನೆ.

ಉಪ್ಪಳದಲ್ಲಿ ಆಟೋ ಚಾಲ ಕನೂ, ಮಜಲ್ ನಿವಾಸಿಯಾದ ಮುಹಮ್ಮದ್ ಸುಹೈಲ್ ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಈತನನ್ನು ಶನಿವಾರದಂದು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಸಮಗ್ರ ತನಿಖೆ ಗೊಳಪಡಿಸಲಾಗುತ್ತಿದೆ. ಈತ ಬಂದೂಕು ಕೈವಶವಿರಿಸಿಕೊಂ ಡಿರುವುದರ ಉದ್ದೇಶವೇನೆಂದು  ತಿಳಿದುಬಂದಿಲ್ಲ. ಸೆರೆಗೀಡಾದ ಮುಹ ಮ್ಮದ್ ಸುಹೈಲ್‌ನ ಹಿನ್ನೆಲೆಯ ಕುರಿತು ತಿಳಿಯುವ ಅಂಗವಾಗಿ ಗುಜರಾತ್ ಪೊಲೀಸರು ಕೇರಳ ಪೊಲೀಸರ ಸಹಾಯ ಯಾಚಿಸಿ ದ್ದಾರೆ.  ಇದೇ ವೇಳೆ ಗುಜರಾತ್ ಪೊಲೀಸರಿಂದ ಲಭಿಸಿದ ಮಾಹಿತಿ ಆಧಾರದಲ್ಲಿ ಮಂಜೇಶ್ವರ ಪೊಲೀಸರು ಹಾಗೂ  ವಿವಿಧ ಗುಪ್ತಚರ ಏಜೆನ್ಸಿಗಳು ತನಿಖೆ ಆರಂಭಿಸಿವೆ. ಬಂಧಿತನು ಗಾಂಜಾ ಸಾಗಾಟ ತಂಡಗಳೊಂದಿಗೆ ನಂಟು ಹೊಂದಿದ್ದಾನೆಂದೂ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page