ಬಂದ್ಯೋಡು ಬಳಿ ವಾಹನ ಅಪಘಾತ: ಶಬರಿಮಲೆಯಿಂದ ಮರಳುತ್ತಿದ್ದ ಅಯ್ಯಪ್ಪ ಭಕ್ತರಾದ ನಾಲ್ಕು ಮಂದಿಗೆ ಗಾಯ
ಉಪ್ಪಳ: ಶಬರಿಮಲೆಗೆ ಹೋಗಿ ಮರಳುತ್ತಿದ್ದ ವಾಹನ ಹಾಗೂ ಖಾಸಗಿ ಬಸ್ ಮಧ್ಯೆ ಉಂಟಾದ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡ ಘಟನೆ ನಿನ್ನೆ ಬೆಳಿಗ್ಗೆ ಬಂದ್ಯೋಡು ಬಳಿ ಸಂಭವಿಸಿದೆ. ವ್ಯಾನ್ ಹಾಗೂ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಅಯ್ಯಪ್ಪ ಭಕ್ತರಾದ ಮಂಗಳೂರು ಮಲಾರ್ ನಿವಾಸಿಗಳಾದ ರಮೇಶ, ಲಿಂಗಪ್ಪ, ಸುಂದರ, ಸುರೇಶ ಗಾಯಗೊಂಡಿ ರುವುದಾಗಿ ತಿಳಿದುಬಂದಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ.