ಬಜೆಟ್‌ನಲ್ಲಿ ಜಿಲ್ಲೆಗೆ ಲಭಿಸಿದ್ದು
ಕಾಸರಗೋಡು: ನಿನ್ನೆ ವಿಧಾನಸಭೆ ಯಲ್ಲಿ ವಿತ್ತ ಸಚಿವ ಬಾಲಗೋಪಾಲನ್ ಮಂಡಿಸಿದ ಮುಂಗಡಪತ್ರದಲ್ಲಿ ಜಿಲ್ಲೆಗೆ ಲಭಿಸಿದ್ದೇನು? ಎಂಬ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ. ಕೋವಳಂ ಬೇಕಲ ಒಳನಾಡು ಜಲರಸ್ತೆಗೆ 500 ಕೋಟಿ ರೂ. ಮೀಸಲಿರಿಸಲಾಗಿದ್ದು, 2026ರಲ್ಲಿ ಯೋಜನೆ ಪೂರ್ತಿಯಾಗಲಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ 17 ಕೋಟಿ ರೂ., ಎನರ್ಜಿ ಸ್ಟೋರೇಜ್ ಸಿಸ್ಟಂ ಮೈಲಾಟಿಯಲ್ಲಿ ಸ್ಥಾಪಿಸಲು ೫ ಕೋಟಿ ರೂ., ಕಾಸರಗೋಡು ಬಂದರು ಸಹಿತ ವಿವಿಧ ಬಂದರುಗಳ ಅಭಿವೃದ್ಧಿಗೆ 65 ಕೋಟಿ ರೂ., ಪೆರಿಯ ಏರ್‌ಸ್ಟ್ರಿ ಪ್‌ಗೆ 50 ಲಕ್ಷ ರೂ., ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಘಟಕಗಳ ಆರಂಭ, ಮಂಜೇಶ್ವರ ಮಂಡಲದ ವಿವಿಧ ಯೋಜನೆಗಳಿಗೆ ಒಟ್ಟು 4 ಕೋಟಿ 90 ಲಕ್ಷ ರೂ., ಕಾಸರಗೋಡು ಮಂಡಲದಲ್ಲಿ ಎರಡು ರಸ್ತೆಗಳಿಗೆ 6 ಕೋಟಿ 60 ಲಕ್ಷ ರೂ., ಜೊತೆಗೆ ಕಾಞಂಗಾಡ್, ಉದುಮ, ತೃಕ್ಕರಿಪುರ ಮಂಡಲಗಳ ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ ಮೊತ್ತ ಮೀಸಲಿಡಲಾಗಿದೆ.