ಬಜೆ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ ಸಮಾರೋಪ
ಹೇರೂರು: ಶ್ರೀ ಮಹಾವಿಷ್ಣು ದೇವಸ್ಥಾನ ದೇಲಂತೊಟ್ಟು ಬಜೆ ಇಲ್ಲಿ ನಡೆದ ಕಾರ್ತಿಕ ದೀಪೋತ್ಸವದ ಸಮಾರೋಪದ ಪ್ರಯುಕ್ತ ಧಾರ್ಮಿಕ ಸಭೆ ನಡೆಯಿತು. ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡಿದರು. ಶ್ರೀಧರ್ ಶೆಟ್ಟಿ ಮುಟ್ಟಂ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ವಸಂತ ಪೈ, ಹರಿನಾಥ ಭಂಡಾರಿ , ಶಂಕರ ನಾರಾಯಣ ಹೊಳ್ಳ, ಗೋಪಾಲಕೃಷ್ಣ ಮಯ್ಯ, ಐತ್ತಪ್ಪ ಶೇರಿಗಾರ್, ಶಶಿಕಲಾ ಸುವರ್ಣ, ಆನಂದ ಬಂದ್ಯೋಡು, ಭುಜಂಗ ಶೆಟ್ಟಿ, ರಾಜೇಶ್ ನಾಯ್ಕ್, ಅಮ್ಮ ಪೂಜಾರಿ, ರೇವತಿ ಸುಬ್ಬನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಹರಿನಾರಾಯಣಮಯ್ಯ ಅವರು ಪ್ರಸ್ತಾಪಿಸಿ ಗಣ್ಯರನ್ನು ಸ್ವಾಗತಿಸಿದರು. ಕುಮಾರಿ ಶ್ರಾವ್ಯ ಮಯ್ಯಾ ಬಜೆ ಪ್ರಾರ್ಥನೆ ಹಾಡಿದರು. ಜಯರಾಮ ಶೆಟ್ಟಿ ಕಳೀಲು ಕಾರ್ಯಕ್ರಮವನ್ನು ನಿರೂಪಿಸಿದರು. ಮಾ. ರುಚಿತ್ ಪೂಜಾರಿ ವಂದಿಸಿದರು.