ಬದಿಯಡ್ಕದಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥ ಸಂಚಲನ

ಬದಿಯಡ್ಕ: ಆರ್‌ಎಸ್‌ಎಸ್ ಬದಿಯಡ್ಕ ಖಂಡ್ ವತಿಯಿಂದ ನಡೆದ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಮಾತ ನಾಡಿದರು. ಭಾರತದ ಕುಟುಂಬ ಪದ್ಧತಿ ಅತ್ಯುತ್ತಮವಾಗಿದ್ದು, ಅದನ್ನು ಉಳಿಸಿ ಬೆಳೆಸಬೇಕಾದುದು ಪ್ರತಿಯೋರ್ವ ಭಾರತೀಯನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಯುವಜನಾಂಗಕ್ಕೆ ಹಿರಿಯರ ಸಮರ್ಥ ಮಾರ್ಗದರ್ಶನ ಅಗತ್ಯವಿದೆ ಎಂದು ಅವರು ನುಡಿದರು. ನಿವೃತ್ತ ಐಎಎಸ್ ಅಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಆರ್‌ಎಸ್‌ಎಸ್ ಅಖಿಲ ಭಾರತೀಯ ಸಹ ಪ್ರಚಾರಕ್ ಪ್ರಮುಖ್ ಸುನಿಲ್ ಕುಲಕರ್ಣಿ, ಕಜಂಪಾಡಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಬದಿಯಡ್ಕ ನವಜೀವನ ಶಾಲಾ ಪರಿಸರದಿಂದ ಆರಂಭವಾದ ಪಥಸಂಚಲನದಲ್ಲಿ ನೂರಾರು ಮಂದಿ ಭಾಗವಹಿಸಿದರು.

RELATED NEWS

You cannot copy contents of this page