ಬದಿಯಡ್ಕದಲ್ಲಿ ಜೋಗಿ ಸಮಾಜ ಭವನ ಉದ್ಘಾಟನೆ

ಬದಿಯಡ್ಕ: ಕಾಸರಗೋಡು ಜೋಗಿ ಸಮಾಜ ಸುಧಾರಕ ಸಂಘದ ನೂತನ ಜೋಗಿ ಸಮಾಜಭವನದ ಉದ್ಘಾಟನೆ ಬದಿಯಡ್ಕ ಸಮೀಪದ ಮೂಕಂಪಾರೆಯಲ್ಲಿ ಜರಗಿತು. 1008 ಮಠಾದಿsÃಶ ಶ್ರೀ ರಾಜಗುರು ಶ್ರದ್ಧಾನಾಥ್ ಜೀ ಮಹಾರಾಜ್ ಶ್ರೀ ಯೋಗೀಶ್ವರ ಮಠ ವಿಟ್ಲ ಲೋಕಾ ರ್ಪಣೆಗೊಳಿಸಿದರು. ಸಭಾ ಕಾರ್ಯ ಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಂಘಟನೆಯ ಸ್ಮರಣಸಂಚಿಕೆಯನ್ನು ಅವÀರು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಗೋಪಾಲ ಕೆ. ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಭವಾನಿಶಂಕರ, ಡಾ| ಕೇಶವನಾಥ್ ಮಂಗಳೂರು, ಅಖಿಲ ಕರ್ನಾಟಕ ಜೋಗಿ ಮಹಾಮಂಡಲ ಹುಬ್ಬಳ್ಳಿ ಇದರ ಅಧ್ಯಕ್ಷ ಶಿವಾಜಿ ಡಿ. ಮಧೂರರ್, ವಿಶ್ವಹಿಂದೂ ಪರಿಷತ್ ಮಂಗಳೂರು ಜಿಲ್ಲಾ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಕಿರಣ್ ಜೋಗಿ, ವಿವಿಧ ವಿಭಾಗದ ಅಧ್ಯಕ್ಷರು, ಶಿವರಾಮ ರಘು ಬಳೆಗಾರ್ ಕುಂದಾಪುರ, ಹರಿಶ್ಚಂದ್ರ ಜೋಗಿ ಕಾರ್ಕಳ ಉಡುಪಿ, ಸತೀಶ್ ಜೋಗಿ ಮುಡಿಪು, ಮೋನಪ್ಪ ಜೋಗಿ ಪುತ್ತೂರು, ಸುನಂದ ಕದ್ರಿ, ರಮೇಶ್ ಜೋಗಿ ಕನ್ಯಾನ, ದುಶ್ಯಂತ ಮುಡಿಪು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page