ಬದಿಯಡ್ಕದಲ್ಲಿ ವಿ.ಹಿಂ.ಪದಿಂದ ಗೋಪೂಜೆ: ಗೋವು ಮನುಕಲದ ಉದ್ಧಾರಕ್ಕಾಗಿ ಸೃಷ್ಟಿಯಾಗಿದೆ-ಪುನೀತ್ ಕೆರೆಹಳ್ಳಿ
ಬದಿಯಡ್ಕ: ರಾಜ್ಯದಲ್ಲಿ ನಿರಂತರ ನಡೆಯುತ್ತಿರುವ ಗೋ ಹತ್ಯೆಯ ಪಾಪದ ಫಲವಾಗಿ ಪ್ರಕೃತಿ ಮುನಿದಿದೆ. ಗೋವಿನ ಹತ್ಯೆ ನಡೆಯುತ್ತಿರುವಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ ಎಂದು ನಾವು ಮರೆಯಬಾರದು. ಗೋವು ಮನುಕ ಲದ ಉಳಿವಿಗಾಗಿ, ಉದ್ದಾರಕ್ಕಾಗಿ ಸೃಷ್ಟಿಯಾಗಿದೆಯೆಂದು ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ, ಅಧ್ಯಕ್ಷ ಪುನೀತ್ ಕೆರೆಹಳ್ಳಿ ನುಡಿದರು. ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ವತಿಯಿಂದ ಶನಿವಾರ ಸಂಜೆ ಬದಿಯಡ್ಕದಲ್ಲಿ ಜರಗಿದ ಗೋಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಅವರು ಮಾತನಾಡಿದರು. ಗೋವು, ನೀರು, ಭೂಮಿಯನ್ನು ಮಾತೆಯೆಂದು ಪೂಜಿಸುವ ಸಮಾಜ ನಮ್ಮದು. ಸನಾತನ ಧರ್ಮವನ್ನು ಮರೆತು ಪ್ರಕೃತಿಮೇಲೆ ವಿಕೃತಿ ಕಾಣುವ ಮನುಷ್ಯನಿಗೆ ಪ್ರಕೃತಿಯೇ ಶಿಕ್ಷೆ ನೀಡುತ್ತಿದೆ. ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣವನ್ನು ಕಲಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಗೋವು ದೇಶೀಯ ಪ್ರಾಣಿಯಾಗಬೇಕು ಎಂಬ ಆಶಯವಾಗಿದೆ ಎಂದು ಅವರು ನುಡಿದರು.
ಹಿರಿಯ ಉದ್ಯಮಿ ವಸಂತ ಪೈ ಬದಿಯಡ್ಕ ಉದ್ಘಾಟಿಸಿದರು. ಭಜರಂಗದಳ ಕ್ಷೇತ್ರೀಯ ಸಂಯೋಜಕ್ ಜಿಜೇಶ್ ಪಟ್ಟೇರಿ, ಪ್ರಾಂತ ಸತ್ಸಂಗ್ ಸಹ ಸಂಯೋಜಕ್ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಜಿಲ್ಲಾ ಕಾರ್ಯದರ್ಶಿ ಯಾದವ್ ಕೀರ್ತೇಶ್ವರ, ಕಣ್ಣೂರು ವಿಭಾಗ ಸೇವಾ ಪ್ರಮುಖ್ ಸುರೇಶ್ ಪರಂಕಿಲ, ಭಜರಂಗದಳ ಪ್ರಖಂಡ ಸಂಯೋಜಕ್ ಧನ್ರಾಜ್ ಬದಿಯಡ್ಕ, ವಿಹಿಂಪ ಬದಿಯಡ್ಕ ಪ್ರಖಂಡ ಅಧ್ಯಕ್ಷ ಸುನಿಲ್ ಕಿನ್ನಿಮಾಣಿ ಉಪಸ್ಥಿತರಿದ್ದರು. ಕುಂಬ್ಡಾಜೆ ಖಂಡ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ ಸ್ವಾಗತಿಸಿ, ಜಿಲ್ಲಾ ಸಹ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ ವಂದಿಸಿದರು. ಪ್ರಖಂಡ ಕಾರ್ಯದರ್ಶಿ ರಮೇಶ್ಕೃಷ್ಣ ಪದ್ಮಾರ್ ನಿರೂಪಿಸಿದರು. ರಕ್ಷಿತ್ ಕೆದಿಲ್ಲಾಯ, ಎಸ್.ಎಂ. ಉಡುಪ ಗೋಪೂಜೆ ನೆರವೇರಿಸಿದರು. ಜಿಲ್ಲಾ ಕಾರ್ಯದರ್ಶಿ ಹರಿಪ್ರಸಾದ್ ರೈ, ಪದಾಧಿಕಾರಿಗಳು ಮುಂದಾಳುತ್ವ ವಹಿಸಿದರು.
ವಿವಿಧ ಭಜನಾ ಸಂಘಗಳಿಂದ ಭಜನೆ,ಕುಣಿತ ಭಜನೆ, ಗೋವಿನ ಆಕರ್ಷಕ ಮೆರವಣಿಗೆ ನಡೆಯಿತು.