ಬದಿಯಡ್ಕದ ಮೋಟಾರು ವಿವಾದದ ಹಿಂದೆ ರಾಜಕೀಯದಾಟ- ಪಂ. ಅಧ್ಯಕ್ಷೆ ಶಾಂತ

ಬದಿಯಡ್ಕ: ಪೆರಡಾಲ ಕಾಲನಿಯ ಶುದ್ಧ ಜಲ ವಿತರಣೆಗಾಗಿದ್ದ ಮೋಟಾರು ಪಂಪ್ ಕಳವು ನಡೆಸಲಾಗಿದೆ ಎಂಬ ಪ್ರಚಾರ ರಾಜಕೀಯ ಲಾಭಕ್ಕಾಗಿ ಕೆಲವರು ನಡೆಸುವ ಯತ್ನವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಶಾಂತಾ ಬಿ. ತಿಳಿಸಿದ್ದಾರೆ. ಈ ಆರೋಪ ಅಸತ್ಯವೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೆರಡಾಲ ಕಾಲನಿಯ ಮೋಟಾರು ಒಂದು ವರ್ಷದ ಹಿಂದೆ ಹಾನಿಯಾಗಿತ್ತು. ಆ ಬಗ್ಗೆ ಆ ಪಂಪ್ ಆಪರೇಟರ್ ತಿಳಿಸಿದಾಗ ಮೆಕ್ಯಾನಿಕ್‌ನನ್ನು ಕರೆಸಿ ದುರಸ್ತಿ ನಡೆಸಲಾಗಿತ್ತು. ಅದಕ್ಕೆ ೧೮೦೦೦ ರೂಪಾಯಿ ಬಿಲ್  ಮೆಕ್ಯಾನಿಕ್ ನೀಡಿದ್ದು, ಅಷ್ಟು ಮೊತ್ತ ನೀಡಲು ಸಾಧ್ಯವಿಲ್ಲವೆಂದು ಪಂ. ಕಾರ್ಯದರ್ಶಿ ತಿಳಿಸಿದ್ದರು. ಸುಮಾರು ಒಂದು ವರ್ಷದಿಂದ ಆ ಹಣಕ್ಕಾಗಿ ಮೆಕ್ಯಾನಿಕ್ ಪಂಚಾಯತ್‌ಗೆ ತಲುಪುತ್ತಿದ್ದು, ಬಳಿಕ ಪಂಪ್ ತೆಗೆದುಕೊಂಡು ಹೋಗಿರುವುದಾಗಿಯೂ ಆ ಬಗ್ಗೆ ಪಂಚಾಯತ್ ಅಧ್ಯಕ್ಷೆ, ಕಾರ್ಯದರ್ಶಿ, ಸದಸ್ಯರು ಸೇರಿ ಬದಿಯಡ್ಕ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಂ. ಅಧ್ಯಕ್ಷೆ, ಕಾರ್ಯದರ್ಶಿ, ಸದಸ್ಯ ಹಾಗೂ ಮೆಕ್ಯಾನಿಕನ್ನು ಠಾಣೆಗೆ ಕರೆಸಿ ಸಮಸ್ಯೆ ಪರಿಹರಿಸಿದ್ದು, ಬಳಿಕ ಮೆಕ್ಯಾನಿಕ್ ಪಂಪ್ ಇದ್ದರೂ ಸ್ಥಾಪಿಸಿದ್ದರು. ಇದು ಬದಿಯಡ್ಕ ಪಂ.ನಲ್ಲಿ ಮೋಟಾರು ಪಂಪ್‌ನ ಬಗೆಗಿನ ಸತ್ಯ ವಿಷಯ ವೆಂದು ಪಂ. ಅಧ್ಯಕ್ಷೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page