ಬದಿಯಡ್ಕ ಪಂಚಾಯತ್ ಬಂಟರ ಸಂಘದ ಆಶ್ರಯದಲ್ಲಿ ‘ತುಡರ್ ಪರ್ಬ’
ಬದಿಯಡ್ಕ: ಪಂಚಾಯತ್ ಬಂಟರ ಸಂಘದ ಆಶ್ರಯದಲ್ಲಿ ವಳಮಲೆ ಜನನ ತರವಾಡು ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತುಡರ್ ಪರ್ಬ ಕಾರ್ಯಕ್ರಮ ಜರಗಿತು.
ಬದಿಯಡ್ಕ ಪಂಚಾಯತ್ ಸರ್ವಿಸ್ ಸೊಸೈಟಿಯ ಅಧ್ಯಕ್ಷ ನಿರಂಜನ್ ರೈ ಪೆರಡಾಲ ಸಬೆsಯಲ್ಲಿ ಅಧ್ಯಕ್ಷತೆ ವಹಿಸಿದರು. ತರವಾಡಿನ ಯಜಮಾನ ಕುಂಞ ಣ್ಣರೈ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಾಹಿತಿ ಶ್ರೀನಿವಾಸ ಆಳ್ವ ಕಳತ್ತೂರು ಬಂಟ ಸಮಾಜದಲ್ಲಿ ದೀಪಾವಳಿ ಹಬ್ಬದ ಆಚರಣೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ ಚಂದ್ರಹಾಸ ರೈ, ಕುಂಬಳೆ ಪಿರ್ಕಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ ಮಾತನಾಡಿದರು.
ಬದಿಯಡ್ಕ ಪಂಚಾಯತ್ ಬಂಟರ ಸಂಘದ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ಕೋಶಾಧಿಕಾರಿ ಶ್ರೀ ದಯಾನಂದ ರೈ ಮೇಗಿನ ಕಡಾರು, ಜತೆ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಸಮಾಜ ಬಾಂಧವರು ಉಪಸ್ಥಿತರಿದ್ದರು. ಸಮಾಜ ಬಾಂಧವರಿಗೆ ಗೂಡು ದೀಪ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ಜರಗಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬದಿಯಡ್ಕ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಕುಂಬಳೆ ವಲಯ ಬಂಟರ ಸಂಘದ ಜೊತೆ ಕಾರ್ಯದರ್ಶಿ ರವೀಂದ್ರನಾಥ ಶೆಟ್ಟಿ ವಳಮಲೆ ವಂದಿಸಿದರು.