ಬದಿಯಡ್ಕ ಪಂ. ಮಾಜಿ ಅಧ್ಯಕ್ಷ ರಾಮ ಪಾಟಾಳಿ ಸಂಸ್ಮರಣೆ

ಬದಿಯಡ್ಕ: ಬೂತ್ ಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪಕ್ಷಕ್ಕೆ ಭದ್ರಬುನಾದಿ ಹಾಕಿಕೊಟ್ಟ ನಾಯಕರಾಗಿದ್ದಾರೆ ರಾಮ ಪಾಟಾಳಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ನುಡಿದರು. ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಿನ್ನೆ  ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜರಗಿದ ಬಿ. ರಾಮ ಪಾಟಾಳಿಯವರ ಐದನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅವರ ತ್ಯಾಗದ ಫಲವಾಗಿ ಬದಿಯಡ್ಕದಲ್ಲಿ ಕಾಂಗ್ರೆಸ್ ಭದ್ರವಾಗಿ ನೆಲೆಯೂರಿದೆ ಎಂದು ಅಭಿಪ್ರಾಯಪಟ್ಟರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಪಂ. ಉಪಾಧ್ಯಕ್ಷ ಎಂ. ಅಬ್ಬಾಸ್, ಪ್ರಭಾಕರನ್, ಪಿ.ಜಿ. ಚಂದ್ರಹಾಸ ರೈ, ತಿರುಪತಿ ಕುಮಾರ್ ಭಟ್, ಶಾಫಿ ಗೋಳಿಯಡ್ಕ, ಖಾದರ್ ಮಾನ್ಯ, ಜಗನ್ನಾಥ ರೈ, ಅನಸೂಯ, ರಾಮ ಪಟ್ಟಾಜೆ, ಕೃಷ್ಣ ಕುಮಾರ್, ಶ್ರೀನಾಥ್, ಲೆಫ್ಟಿ ಥೋಮಸ್, ರಾಮಕೃಷ್ಣ, ಕುಮಾರನ್ ನಾಯರ್ ಉಪಸ್ಥಿತರಿದ್ದರು. ನಿರಂಜನ ರೈ ಬದಿಯಡ್ಕ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಲೋಹಿತಾಕ್ಷನ್ ನಾಯರ್ ವಂದಿಸಿದರು.

RELATED NEWS

You cannot copy contents of this page