ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಸಂಜೆ ಧರಣಿ

ಬದಿಯಡ್ಕ: ವಂಡಿಪೆರಿಯಾರ್ ಚುರಕಾಲಂ ಎಸ್ಟೇಟ್‌ನಲ್ಲಿ ೬ ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆಗೈದ ಘಟನÉಯ ಅಪರಾದಿsಯನ್ನು ನ್ಯಾಯಾಲಯದಿಂದ ತಪ್ಪಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಪೊಲೀಸ್ ಪಡೆಯೊಂದಿಗೆ ಆಡಳಿತವರ್ಗವು ಕೈಜೋಡಿಸಿದೆ ಎಂದು ದೇಶೀಯ ಕೃಷಿ ಕಾರ್ಮಿಕ ಫೆಡರೇಶನ್ (ಡಿಕೆಟಿಎಫ್) ಜಿಲ್ಲಾ ಅಧ್ಯಕ್ಷ ವಾಸುದೇವನ್ ನಾಯರ್ ಆರೋಪಿಸಿದರು.
ಕೆಪಿಸಿಸಿ ಆಹ್ವಾನದಂತೆ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಬದಿ ಯಡ್ಕದಲ್ಲಿ ಆಯೋಜಿಸಿದ್ದ `ಮಗಳೇ ಕ್ಷಮಿಸು…’ ಸಂಜೆ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಮ್ಮನ್ ಚಾಂಡಿಯವರ ಜನಸಂ ಪರ್ಕ ಯಾತ್ರೆಯನ್ನು ಟೀಕಿಸಿದÀÄ್ದ ಪಿಣರಾಯಿ ವಿಜಯನ್ ಈಗ ನª Àಕೇರಳ ಸಭೆಯ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಬರಿದುಗೊಳಿಸುತ್ತಿದ್ದಾರೆ. ಜನಸೇವೆಯನ್ನು ಮಾಡುವ ಬದಲಾಗಿ ಜನತೆಗೆ ದ್ರೋಹವನ್ನು ಎಸಗುವ ಇಂತಹ ಸರಕಾರ ನಮಗೆ ಬೇಕೆ ಎಂಬ ಚಿಂತನೆ ಆರಂಭವಾಗಿದೆ ಎಂದರು. ಮಾಜಿ ಮಂಡಲ ಅಧ್ಯಕ್ಷ ನಾರಾಯಣ ಎಂ. ನೀರ್ಚಾಲು ಅಧ್ಯಕ್ಷತೆ ವಹಿಸಿ ದ್ದರು. ಬದಿಯಡ್ಕ ಮಂಡಲ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖಂಡರುಗಳಾದ ಎಂ. ಅಬ್ಬಾಸ್, ಚಂದ್ರಹಾಸ ರೈ, ಜಗನ್ನಾಥ ರೈ, ಲೋಹಿತಾಕ್ಷನ್, ಬಡುವನ್ ಕುಂಞÂ, ರಾಮಕೃಷ್ಣನ್, ಸುಂದರ, ವಾಮನ, ಶಾಫಿ ಗೋಳಿಯಡ್ಕ, ಶಾಫಿ ಪಯ್ಯಾಲಡ್ಕ, ಕೃಷ್ಣಕುಮಾರ್, ಶ್ರೀನಾಥ್ ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page