ಬದಿಯಡ್ಕ ಮರ್ಚೆಂಟ್ಸ್, ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್ ಪದಾಧಿಕಾರಿಗಳು

ಬದಿಯಡ್ಕ: ಬದಿಯಡ್ಕ ಮರ್ಚೆಂಟ್ಸ್ ಮತ್ತು ಇಂಡಸ್ಟ್ರಿಯ ಲಿಸ್ಟ್ ಅಸೋಸಿಯೇಶನ್‌ನ ವಾರ್ಷಿಕ ಮಹಾಸಭೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಇತ್ತೀಚೆಗೆ ಜರಗಿತು. ಜಿಲ್ಲಾ ಸಮಿತಿ ಅಧ್ಯಕ್ಷ ಅಹಮ್ಮದ್ ಶರೀಫ್ ಉದ್ಘಾಟಿಸಿದರು. ಘಟಕ ಸಮಿತಿ ಮಾಜಿ ಅಧ್ಯಕ್ಷ ಕೆ. ಮುಹಮ್ಮದ್ ಕುಂಞಿ ಹಾಜಿ ಕುಂಜಾರು ಅಧಕ್ಷತೆ ವಹಿಸಿದರು. ಕೋಶಾಧಿಕಾರಿ ಬಿ. ಜ್ಞಾನದೇವ ಶೆಣೈ ಆಯ-ವ್ಯಯ ಮಂಡಿಸಿದರು. ಕೆ.ಕೆ. ಸಜಿ, ಟಿ. ಮಾಹಿನ್ ಕೋಳಿಕ್ಕರ, ಗಣೇಶ್ ವತ್ಸ ಶುಭಕೋರಿದರು. ನರೇಂದ್ರ ಬಿ.ಎನ್ ಸ್ವಾಗತಿಸಿ, ರವಿ ಎಂ ನವಶಕ್ತಿ ವಂದಿಸಿದರು.

ಇದೇ ವೇಳೆ ನೂತನ ಪದಾಧಿಕಾ ರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನರೇಂದ್ರ ಬಿ.ಎನ್, ಪ್ರಧಾನ ಕಾರ್ಯದರ್ಶಿಯಾಗಿ ರವಿ ಎಂ ನವಶಕ್ತಿ, ಕೋಶಾಧಿಕಾರಿಯಾಗಿ ಜ್ಞಾನದೇವ ಶೆಣೈ ಆಯ್ಕೆಯಾದರು.

You cannot copy contents of this page