ಬದಿಯಡ್ಕ ಮೋಡೆಲ್ ಚೈಲ್ಡ್ ರಿಹಾಬಿಲಿಟೇಶನ್ ಸೆಂಟರ್ ಉದ್ಘಾಟನೆ ೨೯ರಂದು: ಸ್ವಾಗತ ಸಮಿತಿ ರಚನೆ

ಬದಿಯಡ್ಕ: ಬದಿಯಡ್ಕ ಮೋಡೆಲ್ ಚೈಲ್ಡ್ ರಿಹಾಬಿಲಿಟೇಶನ್ ಸೆಂಟರನ್ನು ಈ ತಿಂಗಳ ೨೯ರಂದು ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಉದ್ಘಾಟಿಸುವರು. ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಲು ಸ್ವಾಗತ ಸಮಿತಿ ರೂಪೀಕರಣ ಸಭೆ ನಿನ್ನೆ ಪಂಚಾಯತ್ ಸಿಡಿಎಸ್ ಸಭಾಂ ಗಣದಲ್ಲಿ ಜರಗಿತು. ಪಂ. ಅಧ್ಯಕ್ಷೆ ಬಿ. ಶಾಂತಾ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ. ನೆಲ್ಲಿಕುನ್ನು, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಬ್ಲೋಕ್ ಪಂ. ಅಧ್ಯಕ್ಷ ಗೌರವ ಅಧ್ಯಕ್ಷರಾಗಿಯೂ, ಪಂ. ಅಧ್ಯಕ್ಷೆ ಚೆಯರ್ ಪರ್ಸನ್, ಕಾರ್ಯದರ್ಶಿ ಜನರ್ ಕನ್ವೀನರ್ ಆಗಿರುವ ಸಮಿತಿ ರೂಪೀಕರಿಸ ಲಾಯಿತು. ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಧಿಕಾರಿಗಳು ಸದಸ್ಯರಾಗಿದ್ದಾರೆ.

You cannot copy contents of this page