ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರ ಸಮಿತಿಯಿಂದ ಕೋಮು ಸೌಹಾರ್ದತೆಗೆ ಮಾದರಿ
ಮಂಜೇಶ್ವರ: ಮತ ಸೌಹಾ ರ್ದತೆಯನ್ನು ಕಾಪಾಡಲು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರ ಹಾಗೂ ಪಟ್ಟತ್ತೂರು ಜುಮಾ ಮಸೀದಿ ಮಾದರಿಯಾಗಿದೆ. ಬಲ್ಲಂ ಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ಈ ತಿಂಗಳ ೨೪ರಿಂದ ೨೬ರ ವರೆಗೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ಮಾ ರ್ಚ್ ೧ರಿಂದ ಮಾರ್ಚ್ ೮ ವರೆಗೆ ಕಳಿಯಾಟ ಮಹೋತ್ಸವ ಜರಗಲಿದೆ. ಇದರ ಪ್ರಯುಕ್ತ ಪಟ್ಟತ್ತೂರು ಜುಮಾ ಮಸೀದಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಹ್ವಾನಿಸಲು ಶುಕ್ರವಾರದ ಜುಮಾ ನಮಾಜು ನಡೆಯುವ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕ ಲಶೋತ್ಸವ ಸಮಿತಿಯ ಪದಾಧಿಕಾರಿ ಗಳು ಮಸೀದಿಯ ಆವರಣಕ್ಕೆ ತಲುಪಿ ಆಮಂತ್ರಣ ನೀಡಿದರು. ಮಸೀದಿ ಪದಾ ಧಿಕಾರಿಗಳು ಅತಿಥಿಗಳನ್ನು ಸ್ವಾಗತಿಸಿ ದರು.
ಈ ಸಂದರ್ಭದಲ್ಲಿ ಬಲ್ಲಂ ಗುಡೇಲು ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕರಿಬೈಲ್, ಕಾರ್ಯದರ್ಶಿ ಜಗ ದೀಶ್ ಮೂಡಂಬೈಲ್, ರಾಮ್‌ಪ್ರಕಾಶ್ ಆಳ್ವ ಪಟ್ಟತ್ತಮೊಗರು, ರಮೇಶ್ ಸುವರ್ಣ, ಕಾರ್ತಿಕ್ ಶೆಟ್ಟಿ ಮಜಿಬೈ ಲ್, ರಾಜೇಶ್ ಬಲ್ಲಂಗುಡೇಲು, ಪ್ರದೀಪ್ ಶೆಟ್ಟಿ ಬಲ್ಲಂಗುಡೇಲು, ಅಖಿಲೇಶ್ ಕಂಗುಮೆ, ಶಿವಪ್ರಸಾದ್, ಮಸೀದಿಯ ಅಧ್ಯಕ್ಷರಾದ ಅಬ್ದುಲ್ಲ ಕೆ, ಮೂಸ ಪಿ, ಅಜ್ಜಿಹಿತ್ತಿಲು, ಮೂಸ ಎ ವಲಿಯವಳಪ್ಪು, ಅಬ್ದುಲ್ ರಹಮಾನ್, ಬಷೀರ್ ಮೂಡಂಬೈಲ್, ಅಬೂಬಕ್ಕರ್ ಪಟ್ಟತ್ತೂರು, ಮಹಮ್ಮದ್ ಅಶ್ರಫ್ ಮೂಡಂಬೈಲ್, ಇಬ್ರಾಹಿಂ ಆಶಿಕ್ ಮೂಡಂಬೈಲ್ ಉಪಸ್ಥಿತರಿದ್ದರು.