ಬಳ್ಳೂರು ನಿವಾಸಿ ಖತ್ತರ್ ಸಂಸ್ಥೆಯ ಮಾಲಕನಿಗೆ ಗ್ಲೋಬಲ್ ಪ್ರಶಸ್ತಿ

ಪೈವಳಿಕೆ: ಖತ್ತರ್‌ನ ಅಲ್ ಮಾರ್ಖಿಯ ವ್ಯಾಪಾರ ಸಂಸ್ಥೆಯ ಎಂ.ಡಿ. ಸುಲೈಮಾನ್ ಬಳ್ಳೂರು ಇವರಿಗೆ ಗ್ಲೋಬಲ್ ಪ್ರಶಸ್ತಿ ಲಭಿಸಿದೆ. ಕಠಿಣ ಪರಿಶ್ರಮದ ಮೂಲಕ ವ್ಯಾಪಾರ ಸಾಮ್ರಾಜ್ಯ ಕಟ್ಟಿದ ಇವರು ಪೈವಳಿಕೆ ಪಂ. ಬಾಯಾರು ಬಳ್ಳೂರು ನಿವಾಸಿಯಾಗಿದ್ದಾರೆ. 1997ರಲ್ಲಿ ಉದ್ಯೋಗ ಹುಡುಕಿ ವಿದೇಶ ತಲುಪಿದ ಇವರು ಖತ್ತರ್‌ನ ನೈಶೇಖ್‌ರ ಮನೆಯಲ್ಲಿ 8ವರ್ಷ ಕೆಲಸ ಮಾಡಿದ್ದಾರೆ. ಈ ಮಧ್ಯೆ ದೋಹಬಿನ್ ಉಮ್ರಾನಿಲ್ ನಲ್ಲಿ ರೆಸ್ಟೋರೆಂಟ್ ಆರಂಭಿಸಿ ವ್ಯಾಪಾರ ರಂಗಕ್ಕೆ ಕಾಲಿರಿಸಿದ್ದರು. ಆ ಬಳಿಕ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಪ್ರಸ್ತುತ ವಿವಿಧ ವಿಭಾಗದ ೩೦ರಷ್ಟು ವ್ಯಾಪಾರ ಸಂಸ್ಥೆಗಳನ್ನು ಹೊಂದಿರುವ ಇವರ ಕಂಪೆನಿಗಳಲ್ಲಿ 2300ರಷ್ಟು ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ಊರಿನಲ್ಲೂ ಕಾರುಣ್ಯ ಚಟುವಟಿಕೆಗಳಿಗೆ ನೇತೃತ್ವ ನೀಡುತ್ತಿರುವ ಇವರ ಪರಿಶ್ರಮಕ್ಕೆ ಸೂಕ್ತ ಬೆಲೆ ಲಭಿಸಿದೆ ಎಂದು ಊರಿನವರು ತಿಳಿಸುತ್ತಾರೆ.

RELATED NEWS

You cannot copy contents of this page