ಬಸ್‌ಗಳಲ್ಲಿ ಚಿನ್ನದ ಸರ ಎಗರಿಸುವಿಕೆ: ಕೇರಳ, ಕರ್ನಾಟಕದಲ್ಲಿ ಹಲವು ಕಳವು ಪ್ರಕರಣಗಳ ಆರೋಪಿಗಳಾದ ಇಬ್ಬರು ಯುವತಿಯರ ಸೆರೆ

ಕಾಸರಗೋಡು: ಕೇರಳ ಮತ್ತು ಕರ್ನಾಟಕದಲ್ಲಿ  ನಡೆದ ಹಲವು ಕಳವು ಪ್ರಕರಣಗಳ ಆರೋಪಿಗಳಾದ ತಮಿಳುನಾಡು ನಿವಾಸಿಗಳಾಗಿರುವ ಇಬ್ಬರು ಯುವತಿಯರನ್ನು ಹೊಸ ದುರ್ಗ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮಧುರೈ ನಿವಾಸಿ ಕವಿತ (40) ಮತ್ತು ಮಧುರೈ ಗಾಂಧಿನಗರದ ಕಸ್ತೂರಿ (36) ಬಂಧಿತ ಆರೋಪಿಗಳು.

ಜನನಿಬಿಡ ಬಸ್‌ಗಳಿಗೆ ಪ್ರಯಾ ಣಿಕರ ಸೋಗಿನಲ್ಲಿ ಏರಿ ಮಹಿಳಾ ಪ್ರಯಾಣಿಕರು ಮತ್ತು ಮಕ್ಕಳ ಕುತ್ತಿಗೆಯಿಂದ ಚಿನ್ನದ ಸರ ಎಗರಿಸು ವುದು ಈ ಇಬ್ಬರು  ಯುವತಿಯರ ಪ್ರಧಾನ  ಕಸುಬಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಹೊಸದುರ್ಗದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಾಳಕ್ಕೋಡು ನಿವಾಸಿ ಲಕ್ಷ್ಮೀ ಎಂಬವರ ಕುತ್ತಿಗೆಯಿಂದ ಬಸ್ ಪ್ರಯಾಣದ ಮಧ್ಯೆ  ಎರಡು ಪವನ್‌ನ ಚಿನ್ನದ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ  ಈ ಇಬ್ಬರನ್ನು ಬಂಧಿಸಲಾಗಿದೆ. ಬಸ್‌ನ ಸಿಸಿ ಟಿವಿ  ಕ್ಯಾಮರಾವನ್ನು ಪರಿಶೀಲಿಸಿದಾಗ ಅದರಲ್ಲಿ ಈ ಇಬ್ಬರು ಆರೋಪಿಗಳ ಸ್ಪಷ್ಟ ಚಿತ್ರಣ ಲಭಿಸಿತ್ತು. ಅದರಂತೆ ಅವರನ್ನು ಬಂಧಿಸಲಾಗಿದೆ. ಈ ಇಬ್ಬರ ದೃಶ್ಯಗಳು ಬಸ್‌ಗಳ ಸಿಸಿ ಟಿವಿ ಕ್ಯಾಮರಾಗಳಲ್ಲಿ ಪತ್ತೆಯಾಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಕಣ್ಣೂರು, ಮಣ್ಣಾರ್‌ಕಾಡ್, ತಿರೂರಂಗಾಡಿ, ವಡಗರೆ, ಕೊಯಿಲಾಂಡಿ, ತಲಶ್ಶೇರಿ ಮತ್ತು ಕೂತುಪರಂಬ  ಪೊಲೀಸ್ ಠಾಣೆಗಳಲ್ಲೂ ಈ ಇಬ್ಬರು ಯುವತಿಯರವಿರುದ್ಧ ಇದೇ ರೀತಿಯ ಕೇಸುಗಳಿವೆ. ಮಾತ್ರವಲ್ಲ ೨೦೨೨ರಲ್ಲಿ ಕರ್ನಾಟಕದ ಪುತ್ತೂರು  ಪೊಲೀಸ್ ಠಾಣೆಯಲ್ಲೂ ದಾಖಲಾಗಿರುವ ಪ್ರಕರಣವೊಂ ದರಲ್ಲ್ಲೂ ಈ ಇಬ್ಬರು ಆರೋಪಿಗಳಾಗಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page