ಬಸ್‌ಗಳು ಕರಂದಕ್ಕಾಡಿನ ಮೂಲಕವೇ ಹೊಸ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು-ಟ್ರಾಫಿಕ್ ಪೊಲೀಸ್

ಕಾಸರಗೋಡು: ಕೆಲವು ಖಾಸಗಿ ಬಸ್‌ಗಳು ನಗರದ ಹಳೆ ಬಸ್ ನಿಲ್ದಾಣದಿಂದ ಎಂ.ಜಿ ರಸ್ತೆ, ಬ್ಯಾಂಕ್ ರಸ್ತೆ, ಕರಂದಕ್ಕಾಡು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗದೆ ಹಳೆ ಬಸ್ ನಿಲ್ದಾಣದಿಂ ದಲೇ ತಿರುಗಿಸಿ ಎಂ.ಜಿ ರಸ್ತೆ ಮೂಲಕ ಹೊಸ ಬಸ್ ನಿಲ್ದಾಣಕ್ಕೆ  ಸಾಗುತ್ತಿದ್ದು, ಅಂತಹ ಕ್ರಮ ಸಲ್ಲದೆಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಬಸ್‌ಗಳು ಹಳೆ ಬಸ್ ನಿಲ್ದಾಣದಿಂದ ಬ್ಯಾಂಕ್ ರಸ್ತೆ, ಕರಂದಕ್ಕಾಡಿನ ಮೂಲಕವೇ ಹೊಸ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕೆಂದು  ತಿಳಿಸಿರುವ ಪೊಲೀಸರು ಅದಕ್ಕೆ ಹೊಂದಿಕೊಂಡು ನಿನ್ನೆಯಿಂದ ಅಗತ್ಯದ  ಕ್ರಮದಲ್ಲೂ ತೊಡಗಿ ದ್ದಾರೆ. ಪ್ರಯಾಣಿಕರ ದೂರು ಪರಿಗಣಿಸಿ ಪೊಲೀಸರು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ.

You cannot copy contents of this page